ಮುಕ್ಕಲದಲ್ಲಿ ನೆಮ್ಮದಿ ಕೆಡಿಸಿದ ದೀಪಾವಳಿ “ಬಾಣ”
1 min read
ಧಾರವಾಡ: ದೀಪದ ದೀಪವ ಹಚ್ಚಬೇಕು ಮಾನವ ಎಂಬುದನ್ನ ಸರಿಯಾಗಿ ಅರ್ಥ ಮಾಡಿಕೊಳ್ಳದ ಜನರು ದೀಪಾವಳಿಯನ್ನ ಹೇಗೆಲ್ಲ ಆಚರಣೆ ಮಾಡುತ್ತಾರೆ ಎಂಬುದಕ್ಕೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದ ಈ ಆವಾಂತರವೇ ಸಾಕ್ಷಿಯಾಗಿದೆ.
ನಿನ್ನೆ ರಾತ್ರಿ ದೀಪಾವಳಿ ಹಬ್ಬವನ್ನ ಎಲ್ಲರೂ ಸಂತಸದಿಂದ ಆಚರಣೆ ಮಾಡುತ್ತಿದ್ದಾಗ, ಮುಕ್ಕಲ್ ಗ್ರಾಮದ ಚಂದ್ರಶೇಖರ ಬಡಿಗೇರ ಎಂಬುವರ ಮನೆಯ ಮುಂದೆ ಹಾರಿಸುತ್ತಿದ್ದ ಬಾಣ ನೇರವಾಗಿ ಹೋಗಿ ತೆಂಗಿನಮರಕ್ಕೆ ತಗುಲಿ ಬೆಂಕಿ ಹತ್ತಿದೆ. ಅಷ್ಟೇ ಆಗಿದ್ದರೇ ಜನರು ಸುಮ್ಮನಿರುತ್ತಿದ್ದರು. ಅಲ್ಲಿ ಹೊತ್ತಿ ಉರಿದು ಉಂಡೆ ಉಂಡೆಯಾಗಿ ಮನೆಯ ಮೇಲೆ ಬೀಳತೊಡಗಿದೆ.
ಈ ಘಟನೆಯಿಂದ ಗಾಬರಿಯಾದ ಅಕ್ಕಪಕ್ಕದವರು, ಬೆಂಕಿಯನ್ನ ನಂದಿಸಲು ಮುಂದಾದರಾದರೂ, ತೆಂಗಿನಮರ ಮೇಲೆ ಹತ್ತಲು ಯಾರೂ ಮುಂದೆ ಬಂದಿಲ್ಲ. ಮನೆಯ ಮುಂದೆ ಬಿದ್ದ, ಬೆಂಕಿಯನ್ನಷ್ಟೇ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದೀಪಾವಳಿಯ ಸಂಭ್ರಮವನ್ನ ಹೆಚ್ಚಿಸಬೇಕಾದ ಪಟಾಕಿಗಳು, ಜನರ ನೆಮ್ಮದಿಯನ್ನ ಹಾಳು ಮಾಡಿದ್ದು, ಈ ಬಗ್ಗೆ ಕಲಘಟಗಿ ಠಾಣೆ ಪೊಲೀಸರು ಮಾಹಿತಿಯನ್ನ ಕಲೆ ಹಾಕಿ, ಸಂಬಂಧಿಸಿದವರನ್ನ ವಿಚಾರಣೆ ಮಾಡುತ್ತಿದ್ದಾರೆ.