ಜಸ್ಟ್ 29ರ ಐಪಿಎಸ್: ಹುಬ್ಬಳ್ಳಿ-ಧಾರವಾಡ ಡಿಸಿಪಿಯಾಗಿ ಅಧಿಕಾರ ಸ್ವೀಕಾರ
1 min read
ತಮಿಳುನಾಡು ಮೂಲದ ಕೆ.ರಾಮರಾಜನ್ ಅವರು 12.01.1991ರಲ್ಲಿ ಜನಿಸಿದ್ದು, 2017ರಲ್ಲಿ ಐಪಿಎಸ್ ಕರ್ನಾಟಕ ಕೇಡರಗೆ ಆಯ್ಕೆಯಾಗಿದ್ದರು. ಇದಾದ ಮೇಲೆ ಕಲಬುರಗಿಯಲ್ಲಿ 24.12.2018ರಿಂದ 24.05.2019ರ ವರೆಗೆ ತರಬೇತಿ ಪಡೆದು, ಚೆನ್ನಪಟ್ಟಣ ಉಪವಿಭಾಗಕ್ಕೆ ಎಸಿಪಿಯಾಗಿ ಕಾರ್ಯನಿರ್ವಹಿಸಿದ್ದರು.
ಹುಬ್ಬಳ್ಳಿ: ಕೇವಲ 29 ವಯಸ್ಸಿನ ಐಪಿಎಸ್ ಅಧಿಕಾರಿ ಇಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ರು.
2017ರ ಕರ್ನಾಟಕ ಕೇಡರ್ ನ ಐಪಿಎಸ್ ಆಗಿರುವ ಕೆ.ರಾಮರಾಜನ್, ಇಂದು ಅಧಿಕಾರ ಸ್ವೀಕಾರದ ಸಮಯದಲ್ಲಿ ಯಾರಿಂದಲೂ ಪುಷ್ಪಗುಚ್ಚವನ್ನ ಪಡೆಯದೇ ಮೊದಲ ದಿನವೇ ತಾನೂ, ಸರಳ ವ್ಯಕ್ತಿಯನ್ನುವುದನ್ನ ತೋರಿಸಿಕೊಟ್ಟಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಪ್ರಭಾರದಲ್ಲಿದ್ದ ಹುದ್ದೆಗೆ ಚೆನ್ನಪಟ್ಟಣದಲ್ಲಿ ಎಸಿಪಿಯಾಗಿದ್ದ ಇವರನ್ನ ಅನ್ಯ ಕಾರ್ಯದ ನಿಮಿತ್ತ (ಓಓಡಿ) ಆಧಾರದ ಮೇಲೆ ನಗರಕ್ಕೆ ವರ್ಗಾವಣೆ ಮಾಡಿ, ರಾಜ್ಯ ಸರಕಾರ ನಿನ್ನೆಯಷ್ಟೇ ಆದೇಶ ಮಾಡಿತ್ತು.
ಕಲಬುರಗಿಯಲ್ಲಿ ತರಬೇತಿ ಮುಗಿಸಿರುವ ತಮಿಳುನಾಡು ಮೂಲದ ಕೆ.ರಾಮರಾಜನ್ ವಯಸ್ಸು ಕೇವಲ 29ಯಿದ್ದು, ಕಿರಿಯ ವಯಸ್ಸಿನ ಅಧಿಕಾರಿಯೋರ್ವರು ನಗರದಲ್ಲಿ ಕರ್ತವ್ಯ ಸಲ್ಲಿಸುವಂತಾಗಿದೆ.
ಇಂದು ಮಧ್ಯಾಹ್ನ ಅಧಿಕಾರ ಸ್ವೀಕಾರ ಸಮಯದಲ್ಲಿ ಬರುವ ಎಲ್ಲ ಅಧಿಕಾರಿಗಳಿಗೂ ಮೊದಲೇ ಸೂಚನೆ ನೀಡಿ, ಬೊಕ್ಕೆಗಳನ್ನ ತರದಂತೆ ಹೇಳಲಾಗಿತ್ತು. ಹಾಗಾಗಿಯೇ ಕೇವಲ ಶುಭಾಶಯ ವಿನಿಮಯ ಮಾಡಿಕೊಂಡು, ಅವಳಿನಗರದ ಬಗ್ಗೆ ಪೊಲೀಸ್ ಇನ್ಸಪೆಕ್ಟರಗಳಿಂದ ಮಾಹಿತಿಯನ್ನ ಪಡೆದಿದ್ದಾರೆ.