“ವಿನಯ ಕುಲಕರ್ಣಿ” ಮರೆತ “ಸಂಕಲ್ಪ ಸಮಾವೇಶ
1 min read
ಧಾರವಾಡ: ಹುಬ್ಬಳ್ಳಿಯ ಲೋಟಸ್ ಲೇಕ್ ಹೊಟೇಲನಲ್ಲಿ ನಡೆಯುತ್ತಿರುವ ಬೆಳಗಾವಿ ವಿಭಾಗಮಟ್ಟದ ಸಂಕಲ್ಪ ಸಮಾವೇಶದ ಭಿತ್ತಿ ಪತ್ರಗಳಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿಯವರ ಭಾವಚಿತ್ರವನ್ನ ಕಡೆಗಣಿಸಲಾಗಿದೆ ಎಂದು ಧಾರವಾಡ 71 ಕ್ಷೇತ್ರದ ಕಾರ್ಯಕರ್ತರು ಅಸಮಾಧಾನವ್ಯಕ್ತಪಡಿಸಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ಸಂಕಲ್ಪ ಸಮಾವೇಶಕ್ಕೆ ತಯಾರಿ ನಡೆಯುತ್ತಿದ್ದು, ಬಹುತೇಕ ಬ್ಯಾನರ್ ಬಟ್ಟಿಂಗಳಲ್ಲಿ ವಿನಯ ಕುಲಕರ್ಣಿಯವರ ಭಾವಚಿತ್ರವನ್ನ ಕೈ ಬಿಡಲಾಗಿದೆ.
ಬಿಜೆಪಿ ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ನವೆಂಬರ್ ಐದರಂದು ಬಂಧಿತರಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿಯವರ ಭಾವಚಿತ್ರ ಕಡೆಗಣನೆಗೆ ಅವರ ಅಭಿಮಾನಿಗಳು ತೀವ್ರ ಅಸಮಾಧಾನವ್ಯಕ್ತಪಡಿಸಿದ್ದಾರೆ.
ನಡೆಯುವ ಸಮಾವೇಶದಲ್ಲಿ ಭಾಗವಹಿಸಬೇಕಾ ಅಥವಾ ಬೇಡವೋ ಎಂಬ ಜಿಜ್ಞಾಸೆಯಲ್ಲಿ ಮುಳುಗಿರುವ ಕಾರ್ಯಕರ್ತರ ಬೇಡಿಕೆಗೆ ಪ್ರಮುಖರು ಯಾವ ಥರ ಸ್ಪಂಧಿಸುತ್ತಾರೆಂಬುದನ್ನ ಕಾದು ನೋಡಬೇಕಿದೆ.