ನಾಳೆಯಿಂದ ರಾಜ್ಯದಲ್ಲಿ ಪದವಿ ಕಾಲೇಜುಗಳು ಆರಂಭ: ವಿದ್ಯಾರ್ಥಿಗಳು ಖುಷ್- ದುಗುಡದಲ್ಲಿ ಪಾಲಕರು
1 min read
ಬೆಂಗಳೂರು: ಕಳೆದ 9 ತಿಂಗಳಿಂದ ಬಂದ್ ಆಗಿದ್ದ ಕಾಲೇಜುಗಳು ನಾಳೆಯಿಂದ ರಾಜ್ಯದಲ್ಲಿ ಆರಂಭವಾಗಲಿದ್ದು, ಕೊರೋನಾ ಮುಂಜಾಗೃತೆ ತೆಗೆದುಕೊಂಡು ವಿದ್ಯಾರ್ಥಿಗಳು ಕಾಲೇಜಿಗೆ ಬರಲು ಸರಕಾರ ಸೂಚಿಸಿದೆ.
ಕಳೆದ ತಿಂಗಳು ಈ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಹೇಳಿಕೆ ನೀಡಿ, ಕಾಲೇಜು ಆರಂಭಕ್ಕೆ ಹಲವು ನಿರ್ದೇಶಗಳನ್ನ ತೆಗೆದುಕೊಂಡಿದ್ದರ ಬಗ್ಗೆ ಮಾಹಿತಿಯನ್ನ ನೀಡಿದ್ದರು. ಯಾವುದೇ ಕಾರಣಕ್ಕೆ ಕಾಲೇಜಿಗೆ ಬಂದು ಕಲಿಯಬೇಕೆಂಬುದು ಕಡ್ಡಾಯವಲ್ಲ ಎಂಬುದನ್ನೂ ಡಿಸಿಎಂ ಸ್ಪಷ್ಟಪಡಿಸಿದ್ದರು.
ನಾಳೆಯಿಂದ ಆರಂಭವಾಗುವ ಪದವಿ ಕಾಲೇಜುಗಳಿಗೆ ವಿದ್ಯಾರ್ಥಿಗಳು ಹಾಜರಾಗಬೇಕಾದರೇ, ಪಾಲಕರಿಂದ ಪರವಾನಿಗೆ ಪತ್ರವನ್ನ ವಿದ್ಯಾರ್ಥಿಗಳು ಕಾಲೇಜಿಗೆ ನೀಡಬೇಕಾಗತ್ತೆ. ಆನ್ ಲೈನ್ ಮೂಲಕವೂ ಶಿಕ್ಷಣ ಪಡೆಯುವುದಕ್ಕೆ ಅವಕಾಶವನ್ನ ಮುಂದುವರೆಸಲಾಗಿದೆ.
ಶಿಕ್ಷಣ ಸಂಸ್ಥೆಗಳು ಪದವಿ ಕಾಲೇಜು ಆರಂಭಕ್ಕೆ ಅನೇಕ ನಿರ್ದೇಶಗಳನ್ನ ಸರಕಾರ ನೀಡಿದೆ. ವಿದ್ಯಾರ್ಥಿಗಳನ್ನ ಹೇಗೆ ಕೂಡಿಸಬೇಕು. ಎಷ್ಟು ವಿದ್ಯಾರ್ಥಿಗಳಿಗೆ ಒಂದೇ ಕ್ಲಾಸನಲ್ಲಿ ಶಿಕ್ಷಣ ನೀಡಬೇಕೆಂಬ ಮಾಹಿತಿಯನ್ನೂ ನೀಡಿದೆ.
ಕೊರೋನಾ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಬಂದ್ ಆಗಿದ್ದ ಕಾಲೇಜುಗಳು ನಾಳೆಯಿಂದ ಆರಂಭವಾಗುತ್ತಿರುವುದು ವಿದ್ಯಾರ್ಥಿ ಸಮೂಹದಲ್ಲಿ ಸಂತಸ ಮೂಡಿಸಿದೆಯಾದರೂ, ಪಾಲಕರಲ್ಲಿನ ದುಗುಡ ಇನ್ನೂ ಕಡಿಮೆಯಾಗಿಲ್ಲ.