ಪುರುಷರೇ ಹುಷಾರ್ ನಿಮ್ಮನ್ನೂ.. ಹುಬ್ಬಳ್ಳಿಯಲ್ಲಿ ಬೆಚ್ಚಿಬಿದ್ದ ಪಾದಚಾರಿ..!
1 min read
ಹುಬ್ಬಳ್ಳಿ: ಗೋಕುಲ ಪೊಲೀಸ್ ಠಾಣೆ ವ್ಯಾಪ್ತಿಯ ರಾಜಧಾನಿ ಕಾಲೋನಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನ ವಿಳಾಸ ಕೇಳುವ ನೆಪದಲ್ಲಿ ನಿಲ್ಲಿಸಿ ಮಾತನಾಡುತ್ತಲೇ ಆತನ ಕೊರಳಲ್ಲಿದ್ದ ಸರವನ್ನ ದೋಚಿಕೊಂಡು ಪರಾರಿಯಾದ ಘಟನೆ ನಡೆದಿದೆ.
ಯ್ಯಾಕ್ಟಿವಾ ದ್ವಿಚಕ್ರ ವಾಹನದಲ್ಲಿ ಬಂದ ಅಪರಿಚಿತ ವ್ಯಕ್ತಿಯೋರ್ವ ಬಾಕಳೆ ಎಂಬ ವ್ಯಕ್ತಿಯನ್ನ ನಿಲ್ಲಿಸಿ, ಹೆಗ್ಗೇರಿಗೆ ಹೇಗೆ ಹೋಗಬೇಕು ಎಂದು ಪ್ರಶ್ನಿಸುತ್ತಲೇ, ಬಾಕಳೆ ಉತ್ತರ ಕೊಡುವಾಗಲೇ 20 ಗ್ರಾಂದ ಚಿನ್ನದ ಸರವನ್ನ ದೋಚಿಕೊಂಡು ಪರಾರಿಯಾಗಿದ್ದಾನೆ.
ಯಾವುದೇ ರೀತಿಯ ಭಯವಿಲ್ಲದೇ ವಿಳಾಸ ಹೇಳುತ್ತಿದ್ದ ಬಾಕಳೆ, ಸಡನ್ನಾಗಿ ಸರ ದೋಚಿಕೊಂಡು ಹೋದದ್ದನ್ನ ನೋಡಿ, ಹಿಂದೆ ಬೆನ್ನು ಹತ್ತುವ ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಗೋಕುಲ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ದೂರು ದಾಖಲು ಮಾಡಿಕೊಂಡು ತನಿಖೆ ಮುಂದುವರೆಸಿದ್ದಾರೆ.