ಬೈಕ ಸ್ಕೀಡ್: ಕಾಲು ಕಟ್- ಕಿಮ್ಸನಲ್ಲಿ ಚಿಕಿತ್ಸೆ
1 min read
ಹುಬ್ಬಳ್ಳಿ: ಹಾವೇರಿ ಪಟ್ಟಣದಲ್ಲಿ ಬೈಕ್ ಜಾರಿ ಬಿದ್ದು ಯುವಕನೋರ್ವನ ಕಾಲು ಕಟ್ ಆಗಿರುವ ಘಟನೆ ಹಾವೇರಿ ನಗರದಲ್ಲೇ ನಡೆದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸಗೆ ತರಲಾಗಿದ್ದು, ಚಿಕಿತ್ಸೆಗೆ ಗಾಯಾಳು ಸ್ಪಂಧಿಸುತ್ತಿದ್ದಾರೆ.
ಸ್ಥಳೀಯ ಗುಡ್ಡಪ್ಪ ಆಲೂರ ಎಂಬ ಯುವಕನೇ ಗಾಯಗೊಂಡಿದ್ದಾನೆ. ಬೈಕ ಮೂಲಕ ಮಾರುಕಟ್ಟೆಗೆ ಬರುವಾಗ ಎದುರಿಗೆ ನಾಯಿಯೊಂದು ಬಂದಿದೆ. ಅದನ್ನ ತಪ್ಪಿಸಲು ಬ್ರೇಕ್ ಹಾಕಿದಾಗ, ಬೈಕ ಜಾರಿ ಬಿದ್ದ ಪರಿಣಾಮ, ಅದರಿಂದ ಪಾರಾಗಲು ಯುವಕ ಕೆಳಗೆ ಕಾಲಿಟ್ಟಿದ್ದು, ಅದೇ ಕಾರಣದಿಂದ ಕಾಲು ಮುರಿದಿದೆ.
ಹಾವೇರಿಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹುಬ್ಬಳ್ಳಿಯ ಕಿಮ್ಸಗೆ ಕರೆತರಲಾಗಿದ್ದು, ಚಿಕಿತ್ಸೆಯನ್ನ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಹಾವೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿಯೂ ಕೂಡಾ ಮಾಹಿತಿಯನ್ನ ಕಲೆ ಹಾಕಲಾಗಿದೆ.