ಬ್ಯಾಹಟ್ಟಿಯಲ್ಲಿ ಇತಿಹಾಸ ಸೃಷ್ಟಿಸಿದ ಗ್ರಾ.ಪಂ ಚುನಾವಣೆ: ಕರಿಗಾರಗೆ ತೀವ್ರ ಮುಖಭಂಗ
1 min read
ಹುಬ್ಬಳ್ಳಿ: ತೀವ್ರ ಹಣಾಹಣಿಗೆ ಕಾರಣವಾಗಿದ್ದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ಇತಿಹಾಸ ಸೃಷ್ಟಿಯಾಗಿದೆ. ಕಳೆದ 15 ವರ್ಷಗಳಿಂದ ಅಧಿಕಾರ ನಡೆಸುತ್ತಿದ್ದ ಹಾಲಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ಶಿವಾನಂದ ಕರಿಗಾರ ಬೆಂಬಲಿತರು, ಈ ಬಾರಿ ಅಧಿಕಾರವನ್ನ ಕಳೆದುಕೊಂಡಿದ್ದು, ಬ್ಯಾಹಟ್ಟಿ ಅಭಿವೃದ್ಧಿ ತಂಡದ ಸದಸ್ಯರು ವಿಜಯಶಾಲಿಯಾಗಿದ್ದಾರೆ.
ಬ್ಯಾಹಟ್ಟಿ ಗ್ರಾಮದಲ್ಲಿ ಶಿವಾನಂದ ಕರಿಗಾರ ನಂತರ ಅವರ ಸಹೋದರ ಹನಮಂತ ಕರಿಗಾರ ಬೆಂಬಲಿಗರು ಅಧಿಕಾರ ನಡೆಸಿಕೊಂಡು ಬಂದಿದ್ದರು. ಬ್ಯಾಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒಟ್ಟು 29 ಅಭ್ಯರ್ಥಿಗಳು ಕಣದಲ್ಲಿದ್ದರು. ಇದರಲ್ಲಿ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬ್ಯಾಹಟ್ಟಿ ಅಭಿವೃದ್ಧಿ ತಂಡದ ಬೆಂಬಲಿತರು ಗೆಲುವು ಸಾಧಿಸಿದ್ದಾರೆ. ಈ ಮೂಲಕ ಕಳೆದ 20 ವರ್ಷದ ಅಧಿಕಾರ ಚುಕ್ಕಾಣಿ ಹಿಡಿದಿದ್ದ ಕರಿಗಾರ ಬೆಂಬಲಿತರು, ಈ ಬಾರಿ ಪಂಚಾಯತಿಯನ್ನ ಕಳೆದುಕೊಂಡತಾಗಿದೆ.
ಬ್ಯಾಹಟ್ಟಿ ಗ್ರಾಮ ಪಂಚಾಯತ್ ಚುನಾವಣೆಯ ವಾರ್ಡ್ 2 ನೇ ವಾರ್ಡಿನಲ್ಲಿ ಅತಿ ಹೆಚ್ಚು ಮತಗಳನ್ನ ಪಡೆದು ಸಂತೋಷ ಜೀವನಗೌಡ್ರ ಜಯಗಳಿಸಿದ್ದಾರೆ. ಸತತ ಎರಡನೇಯ ಬಾರಿಗೆ ಸಂತೋಷ ಜಯಗಳಿಸಿದ್ದಾರೆ. ರೋಹಿತ ಹಾಗೂ ಪ್ರಮೋದ ಕೂಡಾ ಜಯಗಳಿಸಿದ್ದು, ಬ್ಯಾಹಟ್ಟಿ ಪಂಚಾಯತಿಯಲ್ಲಿ ಇತಿಹಾಸ ಸೃಷ್ಟಿಯಾಗಿದೆ.
ಎರಡನೇಯ ವಾರ್ಡ್ ವಿವರ
ಒಟ್ಟು ಚಲಾವಣೆ ಮತಗಳು 737
ಸಂತೋಷ ಜೀವನಗೌಡ್ರ ಪಡೆದ ಮತಗಳು 638
ನಿರ್ಮಲಾ ದ್ಯಾವನಗೌಡ್ರಪಡೆದ ಮತಗಳು 575
ಪಾರ್ವತಿ ಮೇಲಿನಮನಿ ಪಡೆದ ಮತಗಳು 586