Posts Slider

Karnataka Voice

Latest Kannada News

ಹುಬ್ಬಳ್ಳಿ: “ಮಾಸ್ಟರ್ ಮೈಂಡ್” ಇನ್ಸಪೆಕ್ಟರ್ ಬಿ.ಕೆ.ಪಾಟೀಲರಿಂದ ಬಹುದೊಡ್ಡ ಜಾಲ ಪತ್ತೆ…!

1 min read
Spread the love

ವಿದೇಶಿಗರಿಗೆ ವಂಚಿಸುತ್ತಿದ್ದ ಆರೋಪಿ ಬಂಧನ

ಹುಬ್ಬಳ್ಳಿ: ವಂಚಕರಿಗೆ ಭಾರತ್ ಪೇ ಸ್ವೈಪಿಂಗ್ ಮಷಿನ್ ನೀಡಿ ಹಣ ಪಡೆದು ವಂಚಿಸುತ್ತಿದ್ದ ಜಾಲವನ್ನು ಪತ್ತೆ ಹಚ್ಚಿದ ಪೊಲೀಸರು ಓರ್ವನನ್ನು ಮೈಸೂರಿನಲ್ಲಿ ಬಂಧಿಸಿದ್ದಾರೆ. ಆರೋಪಿಗಳಿಗೆ ಸೈಪಿಂಗ್ ಮಷಿನ್‌ಗಳನ್ನು ಪೂರೈಸುತ್ತಿದ್ದ ಮಂಗಳೂರು ಮೂಲದ ಮಹ್ಮದ್ ಆಸೀಫ್ ಹಮೀದ್ (43) ಎಂಬ ಆರೋಪಿಯನ್ನು ವಿಶೇಷ ಕಾರ್ಯಾಚರಣೆ ಮೂಲಕ ಮೈಸೂರಿನಲ್ಲಿ ಬಂಧಿಸಲಾಗಿದೆ.

ಆರೋಪಿತನಿಂದ ಕೃತ್ಯಕ್ಕೆ ಉಪಯೋಗಿಸಿದ 02 ಭಾರತ್ ಪೇ ಸ್ವೈಪಿಂಗ್ ಮಷಿನ್, 02 ಮೊಬೈಲ್‌ಗಳು, 01 ಎಸ್.ಬಿ.ಐ ಎಟಿಎಂಗಳನ್ನು ವಶಕ್ಕೆ ಪಡೆದುಕೊಂಡ ತಂಡವು ಆರೋಪಿಯನ್ನು ಹಾಜರುಪಡಿಸಿದ್ದಾರೆ.

ನ್ಯಾಯಾಲಯಕ್ಕೆ ಪ್ರಕರಣದಲ್ಲಿ ಪರಾರಿಯಾದ ಇನ್ನಿತರ ಆರೋಪಿಗಳ ಪತ್ತೆಗೂ ಸಹ ಬಲೆ ಬೀಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇತ್ತೀಚೆಗೆ ಹುಬ್ಬಳ್ಳಿಯ ವ್ಯಕ್ತಿಯೊಬ್ಬನಿಂದ ಹಣಕಾಸು ವ್ಯವಹಾರಕ್ಕೆಂದು ಭಾರತ್ ಪೇ ಸ್ವೈಪಿಂಗ್ ಮಷಿನ್ ಪಡೆದುಕೊಂಡು ಹಣಕಾಸು ವಂಚನೆ ಎಸಗಿದ ಕುರಿತು ಪ್ರಕರಣವೊಂದು ಸಿಇಎನ್ ಠಾಣೆಯಲ್ಲಿ ದಾಖಲಾಗಿತ್ತು.

ಸ್ವೈಪಿಂಗ್ ಮಷಿನ್ ಪಡೆದುಕೊಂಡ ಆರೋಪಿತರು ಅದರ ಮುಖಾಂತರ ವಿದೇಶಿಗರ ಎಟಿಎಂ ಕಾರ್ಡಗಳ ಗೌಪ್ಯ ಮಾಹಿತಿಯನ್ನು ಬಳಸಿ ಕಾರ್ಡಗಳ ಮಾಲೀಕರೇ ವಸ್ತುಗಳನ್ನು ಖರೀದಿಸಿದ ಹಾಗೆ ಮೋಸ ಮಾಡಿ ಹಣ ವರ್ಗಾವಣೆ ಮಾಡಿಕೊಂಡು ಪರಾರಿಯಾಗಿದ್ದರು.

ಈ ಪ್ರಕರಣದ ಗಂಭೀರತೆ ಹಾಗೂ ಸೂಕ್ಷ್ಮತೆಯನ್ನರಿತ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ಘಟಕದ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಕರಣವನ್ನು ಭೇದಿಸಲು ಸಿಇಎನ್ ಪೊಲೀಸ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಬಿ.ಕೆ.ಪಾಟೀಲ ನೇತೃತ್ವದಲ್ಲಿ ವಿಶೇಷ ತಂಡವೊಂದನ್ನು ರಚಿಸಿದ್ದರು. ತಕ್ಷಣ ಕಾರ್ಯಪ್ರವೃತ್ತವಾದ ತಂಡವು ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಿ ಆರೋಪಿಗಳ ಜಾಡು ಹಿಡಿದು ಮೈಸೂರಿಗೆ ತೆರಳಿ ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.


Spread the love

Leave a Reply

Your email address will not be published. Required fields are marked *