ಬಿಜೆಪಿಯಲ್ಲಿ ಹರಕು ಬಾಯಿ ಯಾರದ್ದು- ಶಿಸ್ತಿನ ಪಕ್ಷದಲ್ಲೀ ‘ಬಾಯಿ’- ‘ಬಾಯಿ’
1 min read
ವಿಜಯಪುರ: ಭಾರತೀಯ ಜನತಾ ಪಕ್ಷದಲ್ಲಿ ಸಿಎಂ ಯಡಿಯೂರಪ್ಪ ವಿರುದ್ಧ ವಿಜಯಪುರ ಶಾಸಕ ಬಸವನಗೌಡ ಪಾಟೀಲಯತ್ನಾಳ ಮಾತನಾಡಿದ ಹಿನ್ನೆಲೆಯಲ್ಲಿ ಶಿಸ್ತಿನ ಪಕ್ಷದಲ್ಲಿ ನಿರಂತರವಾಗಿ ವಾಕ್ ಸಮರಗಳು ನಡೆಯುತ್ತಲೇ ಇವೆ.
ಸಚಿವ ಕೆ.ಎಸ್.ಈಶ್ವರಪ್ಪ ಶಾಸಕ ಬಸವನಗೌಡ ಪಾಟೀಲ ಯತ್ನಾಳರ ಬಗ್ಗೆ ಮಾತನಾಡಿರುವ ಬೆನ್ನಲ್ಲೇ ಅಂಕುಶ ವಶಿಷ್ಠ ಎಂಬುವರ ಫೇಸ್ಬುಕ್ ಪೋಸ್ಟ್ ಶೇರ್ ಮಾಡುವ ಮೂಲಕ ಯತ್ನಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಶ್ವರಪ್ಪನವರೇ ಹರಕು ಬಾಯಿ ಯಾರದ್ದು ಅಂತ ನಮಗೆ ಚೆನ್ನಾಗಿ ಗೊತ್ತಿದೆ. ಯತ್ನಾಳರವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲು ನೀವು ಹೇಳುವದಾದರೆ. ಮೊದಲು ನಿಮ್ಮನ್ನು ಉಚ್ಛಾಟನೆ ಮಾಡಬೇಕು. ಯಾಕಂದ್ರೆ ತಮ್ಮ ರಾಯಣ್ಣ ಬ್ರಿಗೇಡ್ ಮರೆತು ಹೋಯಿತಾ ಎಂದು ಪ್ರಶ್ನಿಸಿರುವ ಪೋಸ್ಟ್. ಈ ಪೋಸ್ಟನ್ನು ಯತ್ನಾಳ ಶೇರ್ ಮಾಡಿ ಈಶ್ವರಪ್ಪರನ್ನು ತರಾಟೆಗೆ ತೆಗೆದುಕೊಂಡ ಯತ್ನಾಳ.
ಸಚಿವ ಈಶ್ವರಪ್ಪನವರು ನಿನ್ನೆ ಕೊಪ್ಪಳದಲ್ಲಿ ಶಾಸಕ ಯತ್ನಾಳರನ್ನ ತರಾಟೆಗೆ ತೆಗದುಕೊಂಡಿದ್ದರು. ಆ ಹಿನ್ನೆಲೆಯಲ್ಲಿ ಸೋಷಿಯಲ್ ಮೀಡಿಯಾ ಮೂಲಕ ಈಶ್ವರಪ್ಪರನ್ನ ತರಾಟೆಗೆ ಯತ್ನಾಳ ತೆಗೆದುಕೊಂಡಿದ್ದಾರೆ.
ದಿನನಿತ್ಯ ನಾವೂ ಶಿಸ್ತಿನ ಪಕ್ಷದವರೆಂದು ಹೇಳಿಕೊಳ್ಳುವ ಬಿಜೆಪಿಯವರಿಗೆ ಇದು ಇನ್ನೂ ಅಶಿಸ್ತು ಎಂದು ಅನಿಸಿರಲಿಕ್ಕಿಲ್ಲವೇ…?