ಅಣ್ಣಿಗೇರಿಯಲ್ಲಿ ಮಿಲ್ಲಿನಲ್ಲಿದ್ದ ಅರಳಿಗೆ ಬೆಂಕಿ- ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲು
1 min read
ಧಾರವಾಡ: ಜಿಲ್ಲೆಯ ಅಣ್ಣಿಗೇರಿ ಪಟ್ಟಣದಲ್ಲಿನ ಮಲ್ಲಿಕಾರ್ಜುನ ಸುರಕೋಡ ಜಿನ್ನಿಂಗ್ ಮತ್ತು ಪ್ರೆಸ್ಸಿಂಗ್ ಪ್ಯಾಕ್ಟರಿಯಲ್ಲಿದ್ದ ಅರಳಿಗೆ ಬೆಂಕಿ ತಗುಲಿ, ಲಕ್ಷಾಂತರ ರೂಪಾಯಿ ಮೌಲ್ಯದ ಮಾಲು ಸುಟ್ಟು ಕರಕಲಾದ ಘಟನೆ ಇಂದು ಬೆಳಿಗ್ಗೆ ನಡೆದಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಹತ್ತಿ ಮತ್ತು ಜಿನ್ನಿಂಗ್ ಮಾಡಿದ ವಸ್ತುಗಳು ಬೇರೆ ಕಡೆ ಇದ್ದು, ಒಂದೇಡೆ ಶೇಖರಣೆ ಮಾಡಿದ್ದ ಅರಳಿಗೆ ಬೆಂಕಿ ತಗುಲಿದೆ. ಸುಮಾರು ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ಅರಳಿ ನಾಶವಾಗಿದೆ. ತಕ್ಷಣವೇ ಅಗ್ನಿ ಶಾಮಕ ದಳದವರು ಬಂದಿದ್ದು, ಬೆಂಕಿಯನ್ನ ಕೆಲವೇ ಗಂಟೆಗಳಲ್ಲಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲ, ಲಕ್ಷಾಂತರ ಮೌಲ್ಯದ ಇನ್ನುಳಿದ ವಸ್ತುಗಳನ್ನ ಬಚಾವ್ ಮಾಡಿದ್ದಾರೆ.
ಮಷೀನ್ ಜೋರಾಗಿ ತಿರುಗುವುದರಿಂದ ಅದರಲ್ಲಿ ಬೆಂಕಿಯ ಕಿಡಿಗಳು ಉತ್ಪತ್ತಿಯಾಗುತ್ತವೆ. ಅದೇ ಕಿಡಿಯೊಂದು ಅರಳಿಗೆ ತಗುಲಿದ್ದು ಇಷ್ಟೇಲ್ಲ ಅವಘಡಕ್ಕೆ ಕಾರಣವಾಗಿದೆ. ಪ್ಯಾಕ್ಟಿರಿಯಲ್ಲಿದ್ದ ಇನ್ನುಳಿದ ವಿಭಾಗಗಳಿಗೆ ಬೆಂಕಿ ಹರಡದಂತೆ ಮುಂಜಾಗ್ರತೆ ತೆಗೆದುಕೊಂಡಿದ್ದರಿಂದ ಸಮಸ್ಯೆ ಮತ್ತಷ್ಟು ಉಲ್ಬಣವಾಗಿಲ್ಲ.
ಸ್ಥಳಕ್ಕೆ ಅಣ್ಣಿಗೇರಿ ಠಾಣೆ ಪಿಎಸ್ಐ ಲಾಲಸಾಬ ಜೂಲಕಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಾಲೀಕರಿಂದ ದೂರು ಪಡೆದು ಹಾನಿಯಾಗಿರುವ ಮಾಹಿತಿಯನ್ನ ಪಡೆದು ದೂರು ದಾಖಲು ಮಾಡಿಕೊಂಡಿದ್ದಾರೆ.