ಅನಿಲಕುಮಾರ ಪಾಟೀಲ್ರೇ, ‘ನಿವಂದ’ ಕೋಮುವಾದಿ ಪಾರ್ಟಿನೇ ಅಧಿಕಾರ ನೀಡಿದೆ..! ಏನ್ಮಾಡ್ತೀರಾ..!
1 min read
ಧಾರವಾಡ: ನಾವೂ ಕೋಮುವಾದಿ ಪಕ್ಷಕ್ಕೆ ಬೆಂಬಲ ನೀಡುವುದು ಸಾಧ್ಯವೇಯಿಲ್ಲ. ಬೇಕಿದ್ದರೇ ನಾವೂ ವಿರೋಧ ಪಕ್ಷವಾಗಿ ಕೂಡುತ್ತೇವೆ ಎಂದು ಯಾರೂ ಕೇಳದೇ ಇದ್ದರೂ ಮಾಹಿತಿಯನ್ನ ಈ- ಮೇಲ್ ಮೂಲಕ ಕಳಿಸಿದ್ದ ಧಾರವಾಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಪಾಟೀಲ ಅವರೇ, ನೀವು ಯಾವ ಪಕ್ಷಕ್ಕೆ ಕೋಮುವಾದಿ ಎಂದಿರೋ ಅದೇ ಪಕ್ಷ ನಿಮಗೆ ಅಧಿಕಾರವನ್ನ ನೀಡಿದೆ. ನೀವು ಯಾವುದನ್ನ ಜಾತ್ಯಾತೀತ ಎಂದಿದ್ದರೋ ಅವರು ತಮ್ಮದೇ ಅಭ್ಯರ್ಥಿಯನ್ನ ಕಣಕ್ಕೆ ಇಳಿಸಿ, ಸೋತಿದ್ದಾರೆ. ನಿಮ್ಮ ಪಕ್ಷದವರು ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಇದಕ್ಕೇನು ಮಾಡುತ್ತೀರಿ ಈಗ.
ನವಲಗುಂದ ಹಾಗೂ ಅಳ್ನಾವರ ಪುರಸಭೆಯ ಚುನಾವಣೆಯಲ್ಲಿ ತಮ್ಮ ನಿಲುವನ್ನ ಸ್ಪಷ್ಟಪಡಿಸಿದ್ದ ತಾವೂ, ಯಾವ ಉದ್ದೇಶಕ್ಕೆ ಎಂಬುದನ್ನ ತಾವೀಗ ಹೇಳುವ ಸಮಯ ಬಂದಿದೆ. ನಿಮಗೆ ಕೋಮುವಾದಿ ಪಕ್ಷದಿಂದ ಪಡೆದ ಅಧಿಕಾರ ಬೇಕಾ.. ಎಂಬುದು ಈಗ ಎದ್ದಿರುವ ಪ್ರಶ್ನೆ.
ನವಲಗುಂದ ಪುರಸಭೆಯಲ್ಲಿ ನಿಮ್ಮ ಪಕ್ಷದ ಮಂಜು ಜಾಧವ ಅಧ್ಯಕ್ಷರಾಗಿ, ಖೈರುನಬಿ ನಾಶಿಪುಡಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇವರಿಗೆ ಬೆಂಬಲ ನೀಡಿದ್ದು ಭಾರತೀಯ ಜನತಾ ಪಕ್ಷದ ಆರು ಸದಸ್ಯರು. ಜೆಡಿಎಸ್ ಪ್ರತ್ಯೇಕ ಅಭ್ಯರ್ಥಿಗಳನ್ನ ಕಣಕ್ಕೆ ಇಳಿಸಿ, ಸೋತಿದೆ. ಹೀಗಾಗಿ, ಇದೀಗ ನವಲಗುಂದ ಪುರಸಭೆ ಕಾಂಗ್ರೆಸ್ ಮಡಿಲಿಗೆ ಬಂದಂತಾಗಿದ್ದು, ಇದು ಕೋಮುವಾದಿ ಎಂದು ನೀವು ಹೇಳಿದ್ದ ಪಕ್ಷದಿಂದ ಬಂದಿದೆ ಎಂಬುದು ನಿಮಗೆ ಗೊತ್ತಿರಬಹುದಲ್ವೆ.
ನಿಮ್ಮ ಮಾತಿಗೆ ನೀವು ಬದ್ಧರಿದ್ದೀರಾ. ಹಾಗಾದ್ರೇ, ಈಗ ಏನು ಮಾಡುತ್ತೀರಿ. ಅಥವಾ ಇದೇಲ್ಲವೂ ನೀವು ಹೆಣೆದ ರಾಜಕೀಯ ದಾಳದಲ್ಲಿ ಕೆಲವು ಕಾಂಗ್ರೆಸ್ ನಾಯಕರನ್ನ ಹೆಸರು ಕೆಡಿಸುವ ಪ್ರಯತ್ನ ನಡೆಯಿತು. ಉತ್ತರದ ನಿರೀಕ್ಷೆಯಲ್ಲಿ ಜನರಿದ್ದಾರೆ..