ಹುಬ್ಬಳ್ಳಿಯ ಮೂರು ಠಾಣೆ- ಓಸಿ ಪ್ರಕರಣ- ನಾಲ್ವರ ಬಂಧನ
1 min readಹುಬ್ಬಳ್ಳಿ: ನಗರದಲ್ಲಿ ಹೆಚ್ಚುತ್ತಿರುವ ಬಾಂಬೆ ಹೆಸರಿನ ಮಟಕಾ ಹಾವಳಿಯನ್ನ ತಡೆಗಟ್ಟಲು ಪೊಲೀಸರು ಪಣ ತೊಟ್ಟಿದ್ದು, ಆರೋಪಿಗಳ ಪತ್ತೆಗಾಗಿ ನಿರಂತರವಾಗಿ ದಾಳಿಯನ್ನ ನಡೆಸುತ್ತಿದ್ದಾರೆ.
ಹಳೇ-ಹುಬ್ಬಳ್ಳಿ ಪೊಲೀಸ ಠಾಣೆ ವ್ಯಾಪ್ತಿಯಲ್ಲಿನ ಹೆಗ್ಗೇರಿ ಪ್ರದೇಶದ ಸೋಮು ಮಾರುತಿ ಹಾಲಹರವಿ ಮಾರುತಿ ಗುಡಿಯ ಹತ್ತಿರ ಮಟಕಾ ಆಡುತ್ತಿದ್ದ ಸಮಯದಲ್ಲಿ ಖಚಿತ ಮಾಹಿತಿಯ ಮೇರೆ ಪೊಲೀಸರು ದಾಳಿ ನಡೆಸಿದ್ದು, ಆರೋಪಿಯನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ 1460 ರೂಪಾಯಿ ಹಾಗೂ ಓಸಿಗೆ ಬಳಸುವ ಪರಿಕರಗಳನ್ನ ವಶಕ್ಕೆ ಪಡೆದಿದ್ದಾರೆ.
ಮತ್ತೊಂದು ಹಳೇ-ಹುಬ್ಬಳ್ಳಿ ಪೊಲೀಸ ಠಾಣೆ ವ್ಯಾಪ್ತಿಯ ಹೆಗ್ಗೇರಿಯಲ್ಲಿ ನಡೆದ ಪೊಲೀಸ್ ಕಾರ್ಯಾಚರಣೆಯಲ್ಲಿ ಇಬ್ಬರನ್ನ ವಶಕ್ಕೆ ಪಡೆಯಲಾಗಿದೆ. ಸೋಮು ಮಾರುತಿ ಹಾಲಹರವಿ ಹಾಗೂ ಮಂಜುನಾಥ ನಾರಾಯಣಸಾ ಬದ್ದಿ ಎಂಬಿಬ್ಬರನ್ನ ಬಂಧನ ಮಾಡಲಾಗಿದೆ. ಬಂಧಿತರಿಂದ 4360 ರೂಪಾಯಿ ಹಾಗೂ ಓಸಿಯ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ.
ವಿದ್ಯಾನಗರ ಪೊಲೀಸ ಠಾಣೆ ವ್ಯಾಪ್ತಿಯ ನೇಕಾರಭವನದ ಮುಂದೆ ಮಟಕಾ ಆಡುತ್ತಿದ್ದ ವ್ಯಕ್ತಿಯನ್ನ ಬಂಧನ ಮಾಡಲಾಗಿದೆ. ಬಂಧಿತನನ್ನ ಹನುಮಂತ ಮಲ್ಲೇಶಪ್ಪ ಖಟಾವಕರ ಎಂದು ಗುರುತಿಸಲಾಗಿದ್ದು, ಬಂಧಿತನಿಂದ 11450 ರೂಪಾಯಿ ನಗದು ಹಾಗೂ ಪರಿಕರಗಳನ್ನ ವಶಕ್ಕೆ ಪಡೆಯಲಾಗಿದೆ.