ಹುಬ್ಬಳ್ಳಿ ಬಂಡಿವಾಡ ಬಳಿ ಭೀಕರ ರಸ್ತೆ ಅಪಘಾತ- ಇಬ್ಬರ ದುರ್ಮರಣ
1 min read
ಹುಬ್ಬಳ್ಳಿ: ಗದಗನಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಇನ್ನೋವ್ವಾ ವಾಹನ ಹುಬ್ಬಳ್ಳಿಯಿಂದ ಗದಗನತ್ತ ತೆರಳುತ್ತಿದ್ದ ಬಲೇನೋ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಸ್ಥಳದಲ್ಲಿಯೇ ಇಬ್ಬರು ಸಾವಿಗೀಡಾಗಿದ್ದು, ಹಲವರಿಗೆ ಗಾಯಗಳಾದ ಘಟನೆ ಕೆಲವೇ ನಿಮಿಷಗಳ ಹಿಂದೆ ಹುಬ್ಬಳ್ಳಿ ತಾಲೂಕಿನ ಬಂಡಿವಾಡ ಸಮೀಪ ಸಂಭವಿಸಿದೆ.
ವೇಗವಾಗಿ ವಾಹನಗಳು ಹೋಗುತ್ತಿದ್ದಾಗ, ಬಲೇನೋ ವಾಹನ ಮತ್ತೊಂದು ವಾಹನವನ್ನ ಓವರಟೇಕ್ ಮಾಡಲು ಹೋಗಿ, ನೇರವಾಗಿ ಬಂದು ಇನ್ನೋವ್ವಾ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಎರಡು ವಾಹನಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ವಾಹನದಲ್ಲಿದ್ದ ನವಲಗುಂದ ಮೆಡಿಕಲ್ ಆಫೀಸರ್ ಸ್ಮೀತಾ ಕಟ್ಟಿ ಸ್ಥಿತಿ ಚಿಂತಾಜನಕವಾಗಿದ್ದು, ಮೃತಪಟ್ಟವರ ಮಾಹಿತಿಯನ್ನ ಕಲೆ ಹಾಕಲಾಗುತ್ತಿದೆ.
ಘಟನೆಯಲ್ಲಿ ಮೃತಪಟ್ಟಿರುವ ವ್ಯಕ್ತಿಗಳ ಬಗ್ಗೆ ಮಾಹಿತಿಯನ್ನ ತೆಗೆಯಲಾಗುತ್ತಿದ್ದು, ಇನ್ಸಪೆಕ್ಟರ್ ಸೇರಿದಂತೆ ಹಲವರು ಸ್ಥಳಕ್ಕೆ ದೌಡಾಯಿಸಿದ್ದು, ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಶವಗಳನ್ನ ಮತ್ತು ಗಾಯಾಳುಗಳನ್ನ ಕಿಮ್ಸಗೆ ರವಾನೆ ಮಾಡಲಾಗುತ್ತಿದೆ.
ಬಲೇನೋ ವಾಹನ ಹುಬ್ಬಳ್ಳಿಯಿಂದ ಬಳ್ಳಾರಿಗೆ ಹೊರಟಿತ್ತು ಎಂದು ಹೇಳಲಾಗಿದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಕ್ರಮವನ್ನ ಜರುಗಿಸುತ್ತಿದ್ದಾರೆ.