ಅಪಘಾತ ಮಾಡಿ ಆಸ್ಪತ್ರೆಗೆ ಸೇರಿಸಿದ ಚಾಲಕ, ಸಾಯುತ್ತಾನೆಂದ ತಕ್ಷಣವೇ ಪರಾರಿಯಾದ
1 min read
ಧಾರವಾಡ: ತಾನು ಮಾಡಿದ ತಪ್ಪಿನಿಂದ ಯುವಕನಿಗೆ ಗಂಭೀರವಾಗಿ ಗಾಯಗೊಂಡ ತಕ್ಷಣವೇ ತಾನೇ ಮುಂದೆ ನಿಂತು ಆಸ್ಪತ್ರೆಗೆ ರವಾನೆ ಮಾಡಿದ್ದಾನೆ. ಗಾಯಾಳು ಯುವಕನ ಪ್ರಾಣ ಹೋಗತ್ತೆ ಎಂದು ಗೊತ್ತಾದ ತಕ್ಷಣವೇ ಇನ್ನೋವಾ ಚಾಲಕ ಆಸ್ಪತ್ರೆಯಿಂದಲೇ ಕಾಲ್ಕಿತ್ತ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡ-ಹುಬ್ಬಳ್ಳಿಯ ಪ್ರಮುಖ ರಸ್ತೆಯ ಗಾಂಧಿನಗರದ ಬಳಿ ಇನ್ನೋವಾ ಕಾರೊಂದು ಕ್ರಾಸ್ ನಲ್ಲಿ ಸಡನ್ನಾಗಿ ಬಂದಿದ್ದರಿಂದ ಬೈಕ್ ಸವಾರ ನೇರವಾಗಿ ಬಂದು ಎಡ ಬಾಗಿಲಿಗೆ ರಭಸವಾಗಿ ಗುದ್ದಿದ್ದಾನೆ. ಇದರಿಂದ ತೀವ್ರವಾದ ರಕ್ತಸ್ರಾವವಾಗಿ, ವಿನಾಯಕ ಬಣಕಾರ ಎಂಬ ಯುವಕ ಸಾವಿಗೀಡಾಗಿದ್ದಾನೆ.
ಅಗಸಿಮನಿ ಎಂಬುವವರ ಹೆಸರಿನಲ್ಲಿರುವ ಇನ್ನೋವಾ ವಾಹನದ ಚಾಲಕ, ವಿನಾಯಕನನ್ನ ಧಾರವಾಡದ ಸಿವಿಲ್ ಆಸ್ಪತ್ರೆಗೆ ತಂದು ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾನೆ. ಆದರೆ, ಆತನ ಪ್ರಾಣ ಉಳಿಯುವುದಿಲ್ಲವೆಂದು ಗೊತ್ತಾದ ತಕ್ಷಣವೇ ಅಲ್ಲಿಂದ ಪರಾರಿಯಾಗಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಧಾರವಾಡ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಲಕನ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದು, ಮೃತ ಯುವಕನ ಶವವನ್ನ ಮರಣೋತ್ತರ ಪರೀಕ್ಷೆ ಮಾಡಿಸಿ, ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ.