Posts Slider

Karnataka Voice

Latest Kannada News

ಹೆಸ್ಕಾಂನಲ್ಲಿ ಎಸಿಬಿ ರೇಡ್: ಸೆಕ್ಷನ್ ಆಫೀಸರ್ ಜೊತೆಗೆ ಆತನ ಕೈಗೂ ಬೇಡಿ..!

1 min read
Spread the love

ಬೆಳಗಾವಿ: ಜಮೀನಿನಲ್ಲಿ ಕೊರೆಸಿದ ಬೋರಬೆಲ್ ಗೆ  ಹೊಸದಾಗಿ ಟಿಸಿ ಅಳವಡಿಸಲು ರೈತನಿಂದ 60 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆಯಲ್ಲಿ ಗೋಕಾಕ ಹೆಸ್ಕಾಂ ಉಪ ವಿಭಾಗದ ಸೆಕ್ಷನ್ ಆಫೀಸರ್ ಹಾಗೂ ಸಿಬ್ಬಂದಿ ಶುಕ್ರವಾರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಬಲೆಗೆ ಬಿದ್ದಿದ್ದಾರೆ.

ಲೋಳಸೂರ ಸೆಕ್ಷನ್ ಆಫೀಸರ್ ಪ್ರಕಾಶ ಪರೀಟ, ಹಾಗೂ ಸಿಬ್ಬಂದಿ ಮಲ್ಲಯ್ಯ ಹಿರೇಮಠ ಅರೋಪಿಗಳಾಗಿದ್ದಾರೆ. ಎಸಿಬಿ ಅಧಿಕಾರಿಗಳು ಇಬ್ಬರನ್ನೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಅರಭಾವಿಯ ಆನಂದ ಧರ್ಮಟ್ಟಿ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ. ಲಂಚ ಸ್ವೀಕರಿಸುತ್ತಿದ್ದ ವೇಳೆಯೇ ರೆಡ್ ಹ್ಯಾಂಡ್ ಆಗಿ ಆರೋಪಿಗಳನ್ನು ಬಲೆಗೆ ಕೆಡವಿದ್ದಾರೆ,

ಡಿವೈಎಸ್ಪಿ ವೇಣುಗೋಪಾಲ ನೇತೃತ್ವದಲ್ಲಿ ಇನ್ಸಪೆಕ್ಟರ್‍ಗಳಾದ ಎ.ಎಸ್. ಗುದಿಗೊಪ್ಪ, ಸುನೀಲಕುಮಾರ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.


Spread the love

Leave a Reply

Your email address will not be published. Required fields are marked *