ಆಮ್ ಆದ್ಮಿ ಪಕ್ಷ: ವಾರ್ಡ್ ಉಸ್ತುವಾರಿ, ಸಹ ಉಸ್ತುವಾರಿಗಳ ನೇಮಕ
1 min read
ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ ಗಳಿಗೆ ಆಮ್ ಆದ್ಮಿ ಪಕ್ಷದ ಉಸ್ತುವಾರಿ ಹಾಗೂ ಸಹ- ಉಸ್ತುವಾರಿಗಳನ್ನು ನೇಮಕ ಮಾಡಿ ಜಿಲ್ಲಾಧ್ಯಕ್ಷ ಸಂತೋಷ ನರಗುಂದ ಆದೇಶ ಹೊರಡಿಸಿ ನೇಮಕ ಪತ್ರವನ್ನು ವಿತರಣೆ ಮಾಡಿದ್ದಾರೆ.
ಮಂಜುನಾಥ ಸುಳ್ಳದ ಅವರನ್ನು 31 ವಾರ್ಡ್, ಲತಾ ಅಂಗಡಿ ಅವರನ್ನು 74 ವಾರ್ಡ್, ನವೀನಸಿಂಗ್ ರಜಪೂತ ಅವರನ್ನು 36 ವಾರ್ಡ್ ,ಶಿವಕಿರಣ ಅಗಡಿ ಅವರನ್ನು 22 ವಾರ್ಡ್, ಸನಾ ಕುದರಿ ಅವರನ್ನು 04 ನೇ ವಾರ್ಡ್, ಪ್ರಶಾಂತ ಹುಲಗೇರಿ ಅವರನ್ನು 61 ನೇ ವಾರ್ಡ್ ನ ಉಸ್ತುವಾರಿಗಳಾಗಿ ಹಾಗೂ ಮೆಹಬೂಬ್ ಹೊಸಮನಿ ಅವರನ್ನು 36 ನೇ ವಾರ್ಡ್ ನ ಸಹ ಉಸ್ತುವಾರಿಗಳಾಗಿ ನೇಮಕ ಮಾಡಿದ್ದಾರೆ.
ಇವರುಗಳು ಅರವಿಂದ ಕೇಜ್ರಿವಾಲ ಅವರ ನೇತೃತ್ವದಲ್ಲಿ ದೆಹಲಿ ಮಾದರಿ ಉತ್ತಮ ಆಡಳಿತದಿಂದ ಅವರು ಸ್ಫೂರ್ತಿ ಪಡೆದಿದ್ದಾರೆ. ನೇಮಕ ಪತ್ರವನ್ನು ಒಪ್ಪಿಸಿದ ಜಿಲ್ಲಾಧ್ಯಕ್ಷ ಸಂತೋಷ ನರಗುಂದ, ಪಕ್ಷದ ವಿಸ್ತರಣೆ ಹಾಗೂ ವಾರ್ಡ ಮತ್ತು ಬೂತ್ ಮಟ್ಟದಲ್ಲಿ ಸಂಘಟನೆ ಬಲವರ್ಧನೆಗೆ ಪ್ರಯತ್ನಗಳು ತೀವ್ರಗೊಳಿಸುವಂತೆ ಕರೆ ನೀಡಿದರು.
ದೆಹಲಿ ಮಾದರಿಯಲ್ಲಿ ವಿಶ್ವದರ್ಜೆಯ ಹುಬ್ಬಳ್ಳಿ-ಧಾರವಾಡ ಕಟ್ಟುವ ನಿಟ್ಟಿನಲ್ಲಿ ಮುಖ್ಯ ಮಂತ್ರಿ ಅರವಿಂದ ಕೇಜ್ರಿವಾಲ ಅವರ ನೇತೃತ್ವದ ದೆಹಲಿ ಸರ್ಕಾರದ ಅನೇಕ ಜನಪರ ಕಾರ್ಯಕ್ರಮಗಳ ಕುರಿತು ಜನರಲ್ಲಿ ಅರಿವು ಮೂಡಿಸಿ, ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ, ಹೆಚ್ಚಿನ ಸಂಖ್ಯೆಯಲ್ಲಿ ಜನಸಂಪರ್ಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸೂಚಿಸಿದರು.