ಶೀಘ್ರದಲ್ಲಿ ಜಿಲ್ಲಾ, ತಾಲೂಕು ಪಂಚಾಯತ ಚುನಾವಣೆ… ತಯಾರಿ ಆರಂಭ…!

ಬೆಂಗಳೂರು: ಕಳೆದ ಒಂದೂವರೆ ವರ್ಷದಿಂದ ನೆನೆಗುದಿಗೆ ಬಿದ್ದಿರುವ ಜಿಲ್ಲಾ ಪಂಚಾಯತ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆಗಳು ಶೀಘ್ರದಲ್ಲಿ ನಡೆಯುವ ಸಾಧ್ಯತೆಗಳಿದ್ದು, ಇದಕ್ಕಾಗಿ ಚುನಾವಣಾ ಆಯೋಗ ಸಿದ್ಧತೆಗಳನ್ನ ಆರಂಭಿಸಿದೆ.
ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಆಡಳಿತವಿದ್ದ ಸಮಯದಲ್ಲಿ ಹಲವು ಜಿಪಂ ಮತ್ತು ತಾಪಂ ಕ್ಷೇತ್ರದಲ್ಲಿ ಮೀಸಲಾತಿ ಮಾಡಲಾಗಿತ್ತಲ್ಲದೇ ಕ್ಷೇತ್ರಗಳ ಪುನರ್‌ವಿಂಗಡಣೆ ಮಾಡಲಾಗಿತ್ತು.
ಈ ವಿಷಯ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸುವ ಹಂತಕ್ಕೆ ಹೋಗಿದ್ದರಿಂದ ಚುನಾವಣೆಗಳು ವಿಳಂಬವಾಗುತ್ತ ಬಂದಿತ್ತು. ಇದೀಗ ಚುನಾವಣೆ ನಡೆಸಲು ಆಯೋಗ ಮುನ್ನುಡಿ ಬರೆದಿದ್ದು, ಅದಕ್ಕಾಗಿ ಮತದಾರರ ಪಟ್ಟಿ ತಯಾರಿಸಲು ಆದೇಶ ಹೊರಡಿಸಲಾಗಿದೆ.
ಆಯೋಗವು ಎರಡೇ ತಿಂಗಳಲ್ಲಿ ಚುನಾವಣೆ ಮುಗಿಸುವ ಸಿದ್ದತೆ ನಡೆಸಿದೆ ಎನ್ನಲಾಗಿದ್ದು, ಆಕಾಂಕ್ಷಿಗಳು ಅಖಾಡಾದಲ್ಲಿ ಇಳಿಯಲು ನಾಯಕರ ಬಳಿ ಈಗಾಗಲೇ ಅಲವತ್ತುಗೊಳ್ಳುತ್ತಿದ್ದಾರೆ.