ವಿನಯ ಕುಲಕರ್ಣಿಯವರಿಗೆ ತಪ್ಪಿದ ‘ಸಚಿವಗಿರಿ’- ಸಂತೋಷ ಲಾಡ್‌ರಿಗೆ ಚಾನ್ಸ್…!!
1 min read
ಬೆಂಗಳೂರು: ತೀವ್ರವಾದ ಗೊಂದಲ ಮೂಡಿಸಿದ್ದ ಸಚಿವ ಸ್ಥಾನದ ಚರ್ಚೆಗೆ ಅಂತಿಮ ಮುದ್ರೆಯನ್ನ ಎಐಸಿಸಿ ನೀಡಿದ್ದು, ಹೊಸದಾಗಿ 24 ಶಾಸಕರು ಸಚಿವರಾಗಲಿದ್ದಾರೆ.
ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಿದ್ದ ವಿನಯ ಕುಲಕರ್ಣಿಯವರು ಕ್ಷೇತ್ರದ ಹೊರಗಿದ್ದೆ ಜಯಶಾಲಿಯಾಗಿದ್ದರು. ಇದಾದ ನಂತರ ಶ್ರೀ ಮುರುಘಾಮಠದ ಶ್ರೀಗಳು ಸೇರಿದಂತೆ ಕಾರ್ಯಕರ್ತರು ಮಂತ್ರಿ ಸ್ಥಾನ ನೀಡಬೇಕೆಂದು ಆಗ್ರಹಿಸಿದ್ದರು. ಆದರೆ, ಈ ಸಮಯದಲ್ಲಿ ಅವರ ಹೆಸರನ್ನ ಕೈಬಿಡಲಾಗಿದೆ.
ಕಲಘಟಗಿ ಕ್ಷೇತ್ರದಿಂದ ಜಯಗಳಿಸಿರುವ ಸಂತೋಷ ಲಾಡ ಅವರಿಗೆ ಸಚಿವ ಸ್ಥಾನ ಲಭಿಸಿದ್ದು, ನಾಳೆಗೆ ಅವರು ಕೂಡಾ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.