Posts Slider

Karnataka Voice

Latest Kannada News

ನಲ್ಪಾಡ ಅಧ್ಯಕ್ಷ, ರಕ್ಷಾ ರಾಮಯ್ಯ ಕಾರ್ಯಾಧ್ಯಕ್ಷ: ಯೂಥ್ ಕಾಂಗ್ರೆಸ್ ಮಹತ್ವದ ಬದಲಾವಣೆ..

1 min read
Spread the love

ಬೆಂಗಳೂರು: ರಾಜ್ಯ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳನ್ನ  ಪಡೆದರೂ ಅನರ್ಹರಾಗಿದ್ದ ಮೊಹ್ಮದ ಹ್ಯಾರಿಸ್ ನಲ್ಪಾಡ್ ಅವರನ್ನ ಯುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷರನ್ನಾಗಿ ಮಾಡಿದ್ದು, ಹಾಲಿ ರಕ್ಷಾ ರಾಮಯ್ಯ ಅವರನ್ನ ಕಾರ್ಯಾಧ್ಯಕ್ಷರನ್ನಾಗಿ ಆಯ್ಕ ಮಾಡಲಾಗಿದೆ ಎಂದು ಖಚಿತ ಮೂಲಗಳಿಂದ ತಿಳಿದು ಬಂದಿದೆ.

ಆ್ಯಪ್ ಮೂಲಕ ಹೆಚ್ಚು ಮತ ಪಡೆದರೂ ಕೊನೆಗಳಿಗೆಯಲ್ಲಿ ಮೊಹ್ಮದ ನಲ್ಪಾಡ್ ಅವರನ್ನ ಅನರ್ಹಗೊಳಿಸಿದ್ದ ಕಾಂಗ್ರೆಸ್, ಈಗ ಕಾರ್ಯಕರ್ತರ ಒತ್ತಡಕ್ಕೆ ಮಣಿದು, ಅವರನ್ನೇ ರಾಜ್ಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ನಲ್ಪಾಡ್ ಅನರ್ಹಗೊಂಡ ಹಿನ್ನೆಲೆಯಲ್ಲಿ 2ನೇ ಅತೀ ಹೆಚ್ಚು ಮತಗಳನ್ನ ಪಡೆದಿದ್ದ ರಕ್ಷಾ ರಾಮಯ್ಯರನ್ನ ಕಾರ್ಯಾಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

ಮೊಹ್ಮದ ನಲ್ಪಾಡರ ಅನರ್ಹತೆಯನ್ನ ಖಂಡಿಸಿ ರಾಜ್ಯದ ಹಲವೆಡೆ ತೀವ್ರ ಥರದ ವಿರೋಧಗಳು ಕೇಳಿ ಬಂದಿದ್ದವು. ಪಕ್ಷದ ಕಾರ್ಯಕರ್ತರಿಗೆ ಅನ್ಯಾಯವಾಗುತ್ತದೆ ಎಂದು ಕೆಲವರು ಅಲವತ್ತುಕೊಂಡಿದ್ದರು. ಅಷ್ಟೇ ಅಲ್ಲ, ಪಕ್ಷವನ್ನ ತೊರೆಯುವುದಾಗಿಯೂ ಎಚ್ಚರಿಕೆ ನೀಡಿದ್ದರು.

ಇದೀಗ ಪಕ್ಷದ ಪ್ರಮುಖರು ಯುವ ಕಾಂಗ್ರೆಸ್ ಸಮಸ್ಯೆಯನ್ನ ಕೊನೆಗಾಣಿಸಿದ್ದು, ಮೊಹ್ಮದ ನಲ್ಪಾಡ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿಯೂ, ರಕ್ಷಾ ರಾಮಯ್ಯ ಕಾರ್ಯಾಧ್ಯಕ್ಷರಾಗಿಯೂ ಕಾರ್ಯವನ್ನ ನಿರ್ವಹಿಸಲಿದ್ದಾರೆ.


Spread the love

Leave a Reply

Your email address will not be published. Required fields are marked *