ಯತ್ನಾಳ ಭದ್ರತೆ ಹಿಂಪಡೆದ ರಾಜ್ಯ ಸರಕಾರ: ನನಗೇನಾದ್ರೂ ಯಡಿಯೂರಪ್ಪನವರ ಹೊಣೆಯಂದ ಬಸನಗೌಡ..!
1 min readವಿಜಯಪುರ: ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯಾದ ನಂತರ ಮತ್ತಷ್ಟು ಹೇಳಿಕೆಯನ್ನ ಕೊಡುತ್ತಿದ್ದ ಬಿಜೆಪಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ನೀಡಿದ್ದ ವಯಕ್ತಿಕ ಭದ್ರತೆಯನ್ನ ಸರಕಾರ ಹಿಂದೆ ಪಡೆದಿದ್ದು, ಯತ್ನಾಳ ಮುಖ್ಯಮಂತ್ರಿಯವರಿಗೆ ನೇರವಾಗಿ ಪತ್ರ ಬರೆದು, ನನಗೇನಾದರೂ ನೀವೇ ಹೊಣೆ ಎಂದಿದ್ದಾರೆ.
ಸಿಎಂ, ಗೃಹ ಸಚಿವ, ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಪೊಲೀಸ್ ಕಮೀಶನರ್ ಗೆ ಖಾರವಾಗೇ ಪತ್ರ ಬರೆದು ಕೆಂಡ ಕಾರಿರುವ ಯತ್ನಾಳ್, ನಾನು ಸಿಎಂ ವಿರುದ್ಧ ಹೇಳಿಕೆ ನೀಡಿರೋ ಕಾರಣಕ್ಕೆ ದ್ವೇಷದ ರಾಜಕೀಯ ಮಾಡುತ್ತಿದ್ದೀರಿ ಎಂದು ಪತ್ರದಲ್ಲಿ ಹೇಳಿದ್ದಾರೆ.
ನಿಮ್ಮ ಹಳೆಯ ಸೇಡಿನ ರಾಜಕೀಯಕ್ಕೆ ಈ ಕ್ರಮ ವಹಿಸಿದ್ದೀರಿ. ಇದು ನಿಮ್ಮ ಹಳೆ ಚಾಳಿ, ವಿಕೃತ ಮನಸ್ಥಿತಿ ಬಿಂಬಿಸುತ್ತದೆ. ನಾನು ಪ್ರಖರ ಹಿಂದುತ್ವವಾದಿ, ನನ್ನ ಮೇಲೆ ಸಾಕಷ್ಟು ಬಾರಿ ದಾಳಿಗೆ ಸಂಚು ನಡೆದಿತ್ತು. ನನ್ನ ಜನಪರ ನಿಲುವಿನ ಹೋರಾಟಕ್ಕೆ ಕೆಲವರು ದಾಳಿಗೆ ಸಂಚು ರೂಪಿಸಿದ್ದರು. ಇದನ್ನು ಅರಿತ ಸರ್ಕಾರ ಅವತ್ತು ನಂಗೆ ಭದ್ರತೆ ನೀಡಿತ್ತು. ಆದ್ರೆ, ಬಿಎಸ್ ವೈ ತಮ್ಮ ವಿರುದ್ದ ಹೇಳಿಕೆ ನೋಡಿರೋ ಕಾರಣಕ್ಕೆ ವಾಪಸ್ ಪಡೆದಿದ್ದಾರೆ ಎಂದು ಪತ್ರದಲ್ಲಿ ನಮೂದು ಮಾಡಿದ್ದಾರೆ.
ನಾನು ನಿಮ್ಮ ಭದ್ರತೆಯನ್ನು ನಂಬಿಕೊಂಡು ಹೋರಾಟ ಮಾಡುತ್ತಿಲ್ಲ. ನಿಮ್ಮ ಈ ಕ್ರಮದಿಂದ ನನ್ನ ಹೋರಾಟ ನಿಲ್ಲುವುದಿಲ್ಲ. ಮುಂದೆ ನನ್ನ ಮೇಲೆ ಏನೇ ಅಹಿತಕರ ಘಟನೆಗಳಾದಲ್ಲಿ ನೀವೇ ಹೊಣೆ ಎಂದು ಪತ್ರದಲ್ಲಿ ಖಾರವಾಗಿಯೇ ಯತ್ನಾಳ್ ಬರೆದಿದ್ದಾರೆ.