ಯಾದವಾಡದಲ್ಲಿ ಬಿಜೆಪಿ-ಕಾಂಗ್ರೆಸ್ ಬಾಯಿ ಬಾಯಿ..!
1 min readಧಾರವಾಡ: ತಾಲೂಕಿನ ಯಾದವಾಡ ಗ್ರಾಮ ಪಂಚಾಯತಿಯಲ್ಲಿ ಹೊಸದೊಂದು ಅವಿಷ್ಕಾರ ಮಾಡಲಾಗಿದೆ. ಅಧಿಕಾರಕ್ಕಾಗಿ ಭಾರತೀಯ ಜನತಾ ಪಕ್ಷ ಹಾಗೂ ಕಾಂಗ್ರೆಸ್ ಒಂದಾಗಿದೆ.
ಧಾರವಾಡ ತಾಲೂಕಿನ ಯಾದವಾಡ ಗ್ರಾಮ ಪಂಚಾಯತಿಗೆ 14 ಸ್ಥಾನಗಳಿಗೆ ಚುನಾವಣೆ ನಡೆದು ಇಂದು ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೂ ಇಬ್ಬರು ನಾಮಪತ್ರ ಸಲ್ಲಿಸಿದ್ದರು.
ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಉಪಾಧ್ಯಕ್ಷ ಸ್ಥಾನ ಅ ವರ್ಗ ಮಹಿಳೆ ಹಾಗೂ ಪುರುಷ ಇತ್ತು. ಅಧ್ಯಕ್ಷ ಸ್ಥಾನಕ್ಕೆ 10 ಮಂದಿ ಕೈ ಎತ್ತುವ ಮೂಲಕ ಬಹುಮತ ಸಾಬೀತು ಪಡಿಸಿದ್ರು. 10 ಮಂದಿಯಲ್ಲಿ 6 ಕಾಂಗ್ರೆಸ್ ಬೆಂಬಲಿತ ಸದಸ್ಯರು ಹಾಗೂ 4 ಬಿಜೆಪಿ ಬೆಂಬಲಿತ ಸದಸ್ಯರು ಪಾರ್ವತಿ ಹಿರೇಮಠ ಅವರಿಗೆ ಬೆಂಬಲ ಸೂಚಿಸಿ ಅಧ್ಯಕ್ಷರನ್ನಾಗಿ ಮಾಡಿದ್ರು.
ಇದೇ ವೇಳೆ ಪರಾಭವಗೊಂಡ ಲಕಮಾಪೂರ ಗ್ರಾಮದ ಭೀಮವ್ವ ತೊಟಪ್ಪನವರ ಅವರಿಗೆ ಕೇವಲ 4 ಸದಸ್ಯರು ಬೆಂಬಲ ನೀಡಿದ್ರು.
ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರು ನಾಮಪತ್ರ ಸಲ್ಲಿಸಿದ್ದು, ಯಾದವಾಡ ಗ್ರಾಮದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಲಕ್ಷ್ಮಿ ಗಳಗಿ 10 ಮಂದಿ ಸದಸ್ಯರ ಬಹುಮತ ಪಡೆದು ಉಪಾಧ್ಯಕ್ಷರಾದ್ರು. ಇವರಿಗೆ ಪ್ರತಿಸ್ಪರ್ಧಿಯಾಗಿ ನಾಮಪತ್ರ ಸಲ್ಲಿಸಿದ್ದ ಲಕಮಾಪೂರ ಗ್ರಾಮದ ಗಂಗಪ್ಪ ಮುಮ್ಮಿಗಟ್ಟಿ 4 ಮಂದಿ ಸದಸ್ಯರ ಬೆಂಬಲ ಪಡೆದು ಸೋತರು.