Posts Slider

Karnataka Voice

Latest Kannada News

ಚೆನ್ನಮ್ಮ ಸರ್ಕಲ್ ನಲ್ಲಿ ಒಂದ್ರೂಪಾಯಿಗೆ ಕರಡಿ ಸಂಗಣ್ಣ, ಐದ್ರೂಪಾಯಿಗೆ ನಿರ್ಮಲಾ ಸೀತಾರಾಮನ್ ಹರಾಜು: ಕೂಗಿದ್ದು ಯಾರೂ ಗೊತ್ತಾ..?

1 min read
Spread the love

ಹುಬ್ಬಳ್ಳಿ: ಲೋಕಸಭಾ ಸದಸ್ಯರಿಂದ ರಾಜ್ಯ ಅಭಿವೃದ್ಧಿ ಆಗದ ಹಿನ್ನೆಲೆಯಲ್ಲಿ, ಲೋಕಸಭಾ ಸದಸ್ಯರನ್ನು ಹರಾಜು ಹಾಕುವುದರ ಮೂಲಕ ವಾಟಾಳ್ ನಾಗಾರಾಜ್ ನಗರದ ಚನ್ನಮ್ಮ ವೃತ್ತದಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಹರಾಜು ಹಾಕಿದ ನಂತರ ವಾಟಾಳ ನಾಗರಾಜ ಹೇಳಿದ್ದೇನು.. ಇಲ್ಲಿದೆ ನೋಡಿ

ಉತ್ತರ ಕರ್ನಾಟಕ ಪ್ರವಾಹ, ಅತಿವೃಷ್ಠಿ, ಅನಾವೃಷ್ಠಿಯಿಂದ ತತ್ತರಿಸಿದೆ. ಉತ್ತರ ಕರ್ನಾಟಕ ಹಾಗೂ ರಾಜ್ಯ ಸರ್ಕಾರವನ್ನು ಲೋಕಸಭಾ ಸದಸ್ಯರು ಅಭಿವೃದ್ಧಿ ಮಾಡುತ್ತಿಲ್ಲ.  ಆ ಕಾರಣಕ್ಕಾಗಿ ಕರ್ನಾಟಕದಿಂದ ಆಯ್ಕೆಯಾದ ನಿರ್ಮಲಾ ಸೀತಾರಾಮನ್ ನ್ನು

ಒಂದು ರೂಪಾಯಿಗೆ ಹರಾಜು ಪ್ರಕ್ರಿಯೆ ಆರಂಭ ಮಾಡುವುದರ ಮೂಲಕ ಐದು ರೂಪಾಯಿಗೆ ಮುಗದಿದ್ದು,  ಐದು ರೂಪಾಯಿಗೆ ಎನ್.ಎಚ್. ಪಾಟೀಲರು ಖರೀದಿಸಿದರು.

ಒಂದು ರೂಪಾಯಿಗೆ ಕರಡಿ ಸಂಗಣ್ಣರನ್ನು ಖರೀದಿ ಮಾಡಿದ ಬಾಲಕ. ಹರಾಜಿನಲ್ಲಿ ಬಿಕರಿಯಾಗದ ಧಾರವಾಡ ಸಂಸದ ಪ್ರಹ್ಲಾದ ಜೋಶಿ, ಸದಾನಂದ ಗೌಡ, ಜಿ.ಎಂ ಸಿದ್ದೇಶ್ವರ, ಅನಂತಕುಮಾರ ಹೆಗೆಡೆ, ಬಿ.ವೈ ರಾಘವೇಂದ್ರ, ತೇಜಸ್ವಿ ಸೂರ್ಯ, ದೇವೆಂದ್ರೆಪ್ಪ, ಅಣ್ಣಾ ಸಾಹೇಬ್ ಜೊಲ್ಲೆ, ಪ್ರತಾಪ್ ಸಿಂಹ, ತುಮಕೂರು ಸಂಸದ ಬಸವರಾಜು, ಬಿ.ಡಿ ನಾಯಕ, ಬಿದರ ಸಂಸದ ಭಗವಂತ ಕೂಬಾ, ಡಿ. ಕೆ ಸುರೇಶ, ಪಿಸಿ ಗದ್ದಿಗೌಡರ, ಸುಮಲತಾ ಅಂಬರೀಶ, ಶಿವಕುಮಾರ್ ಉದಾಸಿ, ಪ್ರಜ್ವಲ ರೇವಣ್ಣ, ನಳೀನಕುಮಾರ್ ಕಟೀಲ್, ಪಿಸಿ ಮೋಹನ, ಬಿ.ಎನ್ ಬಚ್ಚೇಗೌಡ, ಶ್ರೀನಿವಾಸ ಪ್ರಸಾದ, ಶೋಭಾ ಕರಂದ್ಲಾಜೆ, ರಮೇಶ ಜಿಗಜಣಗಿ, ನಾರಾಯಣ ಸ್ವಾಮಿ ಇವರೆಲ್ಲ ಸಂಸದರನ್ನು ಪ್ರತಿಯನ್ನು ಹರಾಜು ಹಾಕುವುದರ ಮೂಲಕ ವಿಭಿನ್ನವಾಗಿ ಪ್ರತಿಭಟನೆ ಮಾಡಿದರು.

ಕರವೇ ಜಿಲ್ಲಾಧ್ಯಕ್ಷ ಅಮೃತ ಇಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *

You may have missed