ಜೊತೆಗಿಲ್ಲೆಂಬ ನೋವಿನಲ್ಲೂ ‘ಸಂಭ್ರಮ ಮೂಡಿಸಿದ ಹುಟ್ಟಿದಬ್ಬ’: ಭಾವುಕರಾಗಿದ್ದು ಯಾರೂ ಗೊತ್ತಾ..?
1 min readಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿ ಬಂಧನದ ಸಮಯದಲ್ಲೇ ಅವರ ಹುಟ್ಟುಹಬ್ಬ ಬಂದಿರುವುದು ಅಭಿಮಾನಿಗಳಲ್ಲಿ ಕಾರ್ಯಕರ್ತರಲ್ಲಿ ನೋವುಂಟು ಮಾಡಿದ್ದರೂ, ಸಡಗರದಲ್ಲಿ ಯಾವುದೇ ರೀತಿಯ ಕಡಿಮೆಯಾಗದಂತೆ ವಿನಯ ಕುಲಕರ್ಣಿ ಜನ್ಮ ದಿನವನ್ನ ಆಚರಣೆ ಮಾಡಿದ್ರು.
ಮುರುಘಾಮಠದಲ್ಲಿ ಸರ್ವ ಸಮಾಜಗಳ ಸ್ವಾಭಿಮಾನಿ ವೇದಿಕೆ ವತಿಯಿಂದ ಹುಟ್ಟುಹಬ್ಬ ಆಚರಣೆ ಮಾಡಲಾಯಿತು. ಮುರುಘಾಮಠದ ಮಲ್ಲಿಕಾರ್ಜುನ ಶ್ರೀಗಳ ನೇತೃತ್ವದಲ್ಲಿ ಜ್ಯೋತಿ ಬೆಳಗಿ ಸಸಿಗೆ ನೀರು ಹಾಕುವ ಮೂಲಕ ಹುಟ್ಟುಹಬ್ಬ ಆಚರಿಸಲಾಯಿತು.
ಮಾಜಿ ಸಚಿವ ಎಂ.ಎಂ ಹಿಂಡಿಸಗೇರಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ, ಮುಖಂಡ ಅಲ್ತಾಫ್ ಹಳ್ಳೂರು, ನಾಗರಾಜ ಛಬ್ಬಿ, ಜಿಲ್ಲಾ ಪಂಚಾಯತ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಇನ್ನೊಂದು ಕಡೆ ವಿನಯ ಕುಲಕರ್ಣಿ ಅಭಿಮಾನಿ ಬಳಗದ ವತಿಯಿಂದ ಹುಟ್ಟುಹಬ್ಬದ ಅಂಗವಾಗಿ “ರಕ್ತ ದಾನ ಹಾಗೂ ಅನ್ನಸಂತರ್ಪಣಿ” ನಡೆಸಲಾಯಿತು. ಶಿಬಿರದಲ್ಲಿ ನೂರಾರು ಜನ ರಕ್ತದಾನ ಮಾಡಿದರು. ಲಾಯನ್ಸ್ ಹೆಲ್ತ್ ಕ್ಲಬ್ ಸದಸ್ಯರು, ಅಭಿಮಾನಿ ಬಳಗದ ಬಸವರಾಜ ಜಾಧವ, ಪಾಪು ಧಾರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಭಾವುಕರಾದ ಜಿಪಂ ಅಧ್ಯಕ್ಷೆ
ವಿನಯ ಕುಲಕರ್ಣಿ ಜನ್ಮದಿನಾಚರಣೆಯಲ್ಲಿ ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ ಭಾವುಕರಾದ ಘಟನೆ ಧಾರವಾಡ ಮುರುಘಾಮಠದಲ್ಲಿ ನಡೆದಿದ್ದ ಸರ್ವ ಸಮಾಜಗಳ ಸ್ವಾಭಿಮಾನಿ ಬಳಗದಿಂದ ನಡೆದ ಕಾರ್ಯಕ್ರಮದಲ್ಲಿ ಭಾವುಕರಾದರು.
ನನ್ನ ಸೋದರನ ಜನ್ಮದಿನ ಆಚರಿಸುತ್ತಿರುವ ನಿಮಗೆಲ್ಲ ಧನ್ಯವಾದ ಎನ್ನುತ್ತ ಭಾವುಕರಾದ ವಿಜಯಲಕ್ಷ್ಮೀ.