ಮಾಜಿ ಸಚಿವ ವಿನಯ ಕುಲಕರ್ಣಿ ಮುಂದುವರೆದ ಸಿಬಿಐ ವಿಚಾರಣೆ
1 min readಹುಬ್ಬಳ್ಳಿ: ನಗರದ ಹೊರವಲಯದಲ್ಲಿರುವ ಶಸಸ್ತ್ರ ಮೀಸಲು ಪಡೆಯ ಕಚೇರಿಯಲ್ಲಿ ನಡೆಯುತ್ತಿರುವ ಮಾಜಿ ಸಚಿವ ವಿನಯ ಕುಲಕರ್ಣಿ ವಿಚಾರಣೆ ಇಂದು ಎರಡನೇಯ ದಿನಕ್ಕೆ ಕಾಲಿಟ್ಟಿದ್ದು, ಇಂದು ಏನೇಲ್ಲ ಬೆಳವಣಿಗೆಗಳು ಆಗುತ್ತವೆ ಎಂಬುದನ್ನ ಕಾದು ನೋಡಬೇಕಿದೆ.
ನ್ಯಾಯಾಂಗ ಬಂಧನದಲ್ಲಿದ್ದ ವಿನಯ ಕುಲಕರ್ಣಿ ಅವರನ್ನ ತಮ್ಮ ವಶಕ್ಕೆ ಪಡೆದಿರುವ ಸಿಬಿಐ ತಂಡ, ಈಗಾಗಲೇ ತಾವು ಸಂಗ್ರಹಿಸಿರುವ ಸಾಕ್ಷ್ಯಗಳ ಬಗ್ಗೆಯೂ ಹೇಳಿಕೆಯನ್ನ ಪಡೆಯಲಿದ್ದಾರೆಂದು ಹೇಳಲಾಗಿದೆ.
ಸಿಆರ್ ಮೈದಾನದಲ್ಲಿ ಎರಡು ಪ್ರತ್ಯೇಕ ಕೊಠಡಿಗಳನ್ನ ಪಡೆದಿರುವ ಸಿಬಿಐ ತಂಡ, ಪೂರಕವಾದ ವ್ಯಕ್ತಿಗಳನ್ನ ಕರೆಯಿಸಿ ವಿಚಾರಣೆ ನಡೆಸುತ್ತಿದ್ದಾರೆ. ನಿನ್ನೆ ಮಾಜಿ ಮಂತ್ರಿ ವಿನಯ ಕುಲಕರ್ಣಿ ಆಪ್ತ ಸಹಾಯಕರಾಗಿದ್ದ ಕೆಎಎಸ್ ಅಧಿಕಾರಿಯನ್ನ ವಿಚಾರಣೆ ನಡೆಸಿದ್ದರು.
ಇಂದು ಮತ್ತೆ ಬೇರೆಯವರನ್ನ ಕರೆಸುವ ಸಾಧ್ಯತೆಯಿದ್ದು, ನಾಳೆ ಬೆಳಿಗಿನವರೆಗೆ ವಿಚಾರಣೆ ಮುಂದುವರೆಯಲಿದೆ. ನಾಳೆ ಸಿಬಿಐ ವಶದ ಸಮಯ ಮುಗಿದ ನಂತರ ಮತ್ತೆ ಕೋರ್ಟಗೆ ಹಾಜರುಪಡಿಸಲಿದ್ದಾರೆ.