ಕರ್ನಾಟಕದ ಇತಿಹಾಸದಲ್ಲೇ ಬಹುದೊಡ್ಡ ಕಾರ್ಯಾಚರಣೆ- 1500 ಪೊಲೀಸರಿಂದ ಮೂರು ಜಿಲ್ಲೆಗಳಲ್ಲಿ ಹುಡುಕಾಟ- ಭೀಮಾ ತೀರದ ರಕ್ತ ತರ್ಪಣ
1 min readವಿಜಯಪುರ: ಇಂತಹದೊಂದು ತನಿಖೆಗೆ ಪೊಲೀಸ್ ಇಲಾಖೆ ಮೊದಲ ಬಾರಿಗೆ ಮುಂದಾಗಿದೆ. ಓರ್ವ ನಟೋರಿಯಸ್ ಕ್ರಿಮಿನಲ್ ಮೇಲೆ ನಡೆದಿರುವ ದಾಳಿಯ ಕಾರ್ಯಾಚರಣೆಯ ಬೆನ್ನು ಹತ್ತಿ ಇಷ್ಟೊಂದು ಪ್ರಮಾಣ ಪೊಲೀಸರು, ಆರೋಪಿಗಳ ಜಾಡು ಹಿಡಿಯಲು ಹೊರಟಿದ್ದು, ಇದೇ ಮೊದಲು. ಅದು ಭೀಮಾ ತೀರ ರಕ್ತ ತರ್ಪಣಕ್ಕಾಗಿ..!
ವಿಜಯಪುರ ಜಿಲ್ಲೆ ಹಾಗೂ ಕಲಬುರಗಿ ಜಿಲ್ಲೆಯ ಈ ಭೀಮಾ ತೀರ ದಶಕಗಳಿಂದಲೂ ರಕ್ತಸಿಕ್ತ ಕ್ಷಣಗಳನ್ನ ನೋಡುತ್ತಲೇ ಬಂದಿದೆ. ಇಲ್ಲಿ ಹತ್ಯೆ ಮುಖ್ಯ ಹೊರತಾಗಿ, ಯಾರದ್ದೂ ಎನ್ನುವುದು ಆ ಎರಡು ಕುಟುಂಬಗಳು ಮಾತ್ರ ನಿರ್ಧಾರ ಮಾಡುತ್ತವೆ. ಹಾಗಾಗಿಯೇ, ನಿರ್ಧಾರ ಮಾಡಿದ್ದಂತೆ ನಡೆದದ್ದೇ ಮಹಾದೇವ ಬೈರಗೊಂಡನ ಮೇಲೆ ದಾಳಿ.
ನಿನ್ನೆ ನಡೆದ ಘಟನೆಗೆ ಸಂಬಂಧಿಸಿದಂತೆ ಇಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ, 5 ಬೈಕ್, ಒಂದು ಟಿಪ್ಪರ ಸೇರಿದಂತೆ ಪೆಟ್ರೋಲ್ ಬಾಂಬ್, ಲಾಂಗ್ ಜಪ್ತಿಯನ್ನ ಮಾಡಲಾಗಿದೆ. ಹತ್ಯೆಯ ಹಿಂದ 15ರಿಂದ 20 ಜನರು ಇರಬಹುದೆಂಬ ಶಂಕೆ ಇದೆಯಾದರೂ, ತನಿಖೆ ನಡೆದಂತೆ ಇದರ ಸ್ವರೂಪ ಬದಲಾಗಲಿದೆ ಎಂದು ಹೇಳಿದರು.
ನಿನ್ನೆ ನಡೆದ ಹತ್ಯಾ ಯತ್ನದಲ್ಲಿ ಬೈರಗೊಂಡನ ಮ್ಯಾನೇಜರ ಬಾಬೂರಾಯ ಕಂಚನಾಳಕರ ಮೃತಪಟ್ಟಿದ್ದ. ಘಟನೆಯಲ್ಲಿ ಗಾಯಗೊಂಡಿದ್ದ ಚಾಲಕ ಲಕ್ಷ್ಮಣ ದಿಂಡೋರೆ ಇಂದು ಸಾವಿಗೀಡಾಗಿದ್ದು, ಸಾವುಕಾರ ಮಾತ್ರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದ್ದಾನೆ. ಈ ನಡುವೆ ಘಟನಾ ಸ್ಥಳಕ್ಕೆ FSL ತಂಡದ ಮೂವರು ಸದಸ್ಯರು ಆಗಮಿಸಿದ್ದು, ಸ್ಥಳದಲ್ಲಿ ಸಿಕ್ಕ ಜೀವಂತ ಗುಂಡುಗಳು ಹಾಗೂ ಬೈಕ್ ಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಮೂರು ಜಿಲ್ಲೆಗಳ 1500ಕ್ಕೂ ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಆದಷ್ಟು ಬೇಗನೇ ಆರೋಪಿಗಳ ಪತ್ತೆಗಾಗಿ ಜಾಲ ಬೀಸಲಾಗಿದೆ ಎಂದು ಐಜಿಪಿ ಹೇಳಿದರು.
ಭೀಮಾ ತೀರದ ಹಂತಕ ಮಹಾದೇವ ಬೈರಗೊಂಡ ಅಲಿಯಾಸ್ ಸಾವುಕಾರ, ಕಳೆದ ಎರಡು ವರ್ಷದ ಹಿಂದೆ ಧರ್ಮರಾಜ ಚಡಚಣ ಮತ್ತು ಗಂಗಾಧರ ಚಡಚಣರನ್ನ ಪೊಲೀಸ್ ಸಹಾಯದಿಂದಲೇ ಕೊಲೆ ಮಾಡಿದ್ದ. ಇದಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿ ಹೊರಗೆ ಬಂದ ನಂತರವೂ ತನ್ನ ಪ್ರಾಣ ಉಳಿಸಿಕೊಳ್ಳಲು ಗ್ಯಾಂಗನ್ನ ಸುತ್ತಲೂ ಕಟ್ಟಿಕೊಂಡೇ ಇರುತ್ತಿದ್ದನಾದರೂ, ಕೊನೆಗೆ ಮತ್ತದೇ ಘಟನೆ ಪುನರಾವರ್ತನೆಯಾಗಿದೆ.