ವಿಜಯನಗರ ಜಿಲ್ಲೆಗೆ ಸಿಎಂ ಗ್ರೀನ್ ಸಿಗ್ನಲ್: ಗೆದ್ದ ಆನಂದಸಿಂಗ್_ ಪತ್ರಕ್ಕೀಗ ಒಂದು ವರ್ಷ
1 min readಬೆಂಗಳೂರು: ಹಲವು ರೀತಿಯಲ್ಲಿ ಗೊಂದಲಕ್ಕೆ ಕಾರಣವಾಗಿದ್ದ ವಿಜಯನಗರ ಜಿಲ್ಲೆಯ ರಚನೆಗೆ ಸಿಎಂ ಯಡಿಯೂರಪ್ಪ ಗ್ರೀನ್ ಸಿಗ್ನಲ್ ನೀಡಿದ್ದು, ಸಚಿವ ಆನಂದಸಿಂಗ್ ಬೇಡಿಕೆ ಈಡೇರುವ ಸಮಯ ಸನಿಹಿಸಿದೆ ಎಂಬ ಮಾತುಗಳಿಗೀಗ ಒಂದು ವರ್ಷವಾಗಿದೆ.
ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಮಾಡಿರುವ ಟಿಪ್ಪಣೆಯ ಪ್ರತಿ ಕರ್ನಾಟಕವಾಯ್ಸ್ ಗೆ ಲಭಿಸಿದ್ದು, ಹೊಸದಾಗಿ ರಚನೆಯಾಗಲಿರುವ ವಿಜಯನಗರ ಜಿಲ್ಲೆಯಲ್ಲಿ ಹೊಸಪೇಟೆ, ಕಂಪ್ಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹಡಗಲಿ ಮತ್ತು ಹರಪನಹಳ್ಳಿ ತಾಲೂಕುಗಳು ಸೇರಲಿವೆ ಎಂಬುದನ್ನೂ ಕೂಡಾ ಅಂದು ವಿವರಿಸಿದ್ದರು.
ವಿಜಯನಗರ ಜಿಲ್ಲೆಯು ಹೊಸಪೇಟೆ ಕೇಂದ್ರಿಕೃತವಾಗಿ ಕಾರ್ಯನಿರ್ವಹಣೆ ಮಾಡಲಿದೆ. ಬಳ್ಳಾರಿ ಜಿಲ್ಲೆಗೆ ಬಳ್ಳಾರಿ, ಕುರುಗೋಡು, ಸಿರಗುಪ್ಪ, ಸೊಂಡೂರು ಮತ್ತು ಕೂಡ್ಲಗಿ ತಾಲೂಕುಗಳು ಮುಂದುವರೆಯಲಿವೆ.
ಸಚಿವ ಆನಂದಸಿಂಗ್ ಬೇಡಿಕೆಯನ್ನ ಈ ಹಿಂದೆ ಈಡೇರಿಸಲು ಮುಖ್ಯಮಂತ್ರಿಗಳು ಮುಂದಾದಾಗ ಶಾಸಕ ಸೋಮಶೇಖರರಡ್ಡಿ ವಿರೋಧವ್ಯಕ್ತಪಡಿಸಿದ್ದರು. ಇದೀಗ ಸ್ವತಃ ಸಿಎಂ ಕಾರ್ಯದರ್ಶಿಗೆ ಬರೆದು, ಮುಂದಿನ ಸಂಪುಟ ಸಭೆಯಲ್ಲಿ ಮಂಡನೆ ಮಾಡಲು ಸೂಚಿಸಿದ್ದರು.