ಹೊಸ ವರುಷಕ್ಕೆ ಹೊಸ ಹರುಷದಿಂದ ವಿದ್ಯಾಗಮ ಆರಂಭ: ಹೊರಬಿತ್ತು ಅಧಿಕೃತ ಆದೇಶ
1 min readಬೆಂಗಳೂರು: ಕೋವಿಡ್-19 ಮಹಾಮಾರಿಯು ಶಿಕ್ಷಕ ಸಮೂಹವು ಬಲಿಯಾಗುತ್ತಿದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದ್ದ ವಿದ್ಯಾಗಮ ಕಾರ್ಯಕ್ರಮವನ್ನ ಜನೇವರಿ ಒಂದರಿಂದ ಆರಂಭಿಸಲು ಸರಕಾರ ಸಿದ್ಧವಾಗಿ ಹೊಸ ಆದೇಶವನ್ನ ಹೊರಡಿಸಿದೆ.
ವಿದ್ಯಾಗಮ ಕಾರ್ಯಕ್ರಮ ಪ್ರತಿ ಪ್ರದೇಶದಲ್ಲಿ ನಡೆಯುತ್ತಿತ್ತು. ವಿದ್ಯಾರ್ಥಿಗಳು ಇರುವ ಜಾಗದಲ್ಲಿರುವ ದೇವಸ್ಥಾನ, ಖಾಲಿ ಜಾಗೆಗಳಲ್ಲಿ ಶಿಕ್ಷಣ ಕೊಡಲಾಗುತ್ತಿತ್ತು. ಶಿಕ್ಷಕರ ಎಲ್ಲೆಂದರಲ್ಲಿ ಹೋಗಿ ಪಾಠ ಮಾಡಿದ್ದ ಪರಿಣಾಮದಿಂದಲೇ ಕೊರೋನಾ ಪಾಸಿಟಿವ್ ಬಂದು ಶಿಕ್ಷಕರು ಮೃತಪಟ್ಟರೆಂದು ದೂರುಗಳು ಕೇಳಿಬಂದವು. ಈ ಹಿನ್ನೆಲೆಯಲ್ಲಿ ವಿದ್ಯಾಗಮ ಯೋಜನೆಯನ್ನು ತಾತ್ಕಾಲಿಕವಾಗಿ ಕೈಬಿಡಲಾಗಿತ್ತು.
ಈಗ ಸರಕಾರ ಹೊಸ ರೂಪುರೇಷೆಯೊಂದಿಗೆ ಜನೇವರಿ ಒಂದರಿಂದ ವಿದ್ಯಾಗಮ ಯೋಜನೆ ಆರಂಭವಾಗಲಿದೆ. ಇದಕ್ಕಾಗಿ ಪೂರ್ವ ತಯಾರಿಗಳನ್ನೂ ಮಾಡಲಾಗಿದೆ. ಅಷ್ಟೇ ಅಲ್ಲ, ಮುನ್ನಚ್ಚೆರಿಕೆ ಕ್ರಮಗಳನ್ನು ತೆಗೆದುಕೊಂಡು ಆರಂಭಿಸಲು ಆದೇಶ ಮಾಡಲಾಗಿದೆ.
ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶವನ್ನ ಹೊರಡಿಸಿ, ಪ್ರತಿ ಜಿಲ್ಲೆಯ ಡಿಡಿಪಿಐಗಳಿಗೂ ರವಾನೆ ಮಾಡಿದ್ದಾರೆ.