ಹುಬ್ಬಳ್ಳಿಯ ಉಣಕಲ್ ಕೆರೆಯಲ್ಲಿ ಆತನ ಶವ: ಮಾಡಿದ್ದಾ..? ಆಗಿದ್ದಾ..?
1 min readಹುಬ್ಬಳ್ಳಿ: ಉಣಕಲ್ ಕೆರೆಯಲ್ಲಿ ಸುಮಾರು 25 ವರ್ಷದ ಯುವಕನ ಶವವನ್ನ ನೋಡಿದ ವಾಕಿಂಗ್ ಮಾಡುವವರು ಗಾಬರಿಯಾಗಿ ಅಲ್ಲಿಂದ ಓಡಿ ಹೋದ ಘಟನೆ ಇಂದು ಬೆಳ್ಳಂಬೆಳಿಗ್ಗೆ ಉಣಕಲ್ ಕೆರೆಯ ಬಳಿ ಸಂಭವಿಸಿದೆ.
ಕೆರೆಯಲ್ಲಿ ತೇಲುತ್ತಿದ್ದ ಯುವಕನ ಶವದ ಬಗ್ಗೆ ಮಾಹಿತಿ ಪಡೆದ ತಕ್ಷಣವೇ ಸ್ಥಳಕ್ಕೆ ಆಗಮಿಸಿರುವ ವಿದ್ಯಾನಗರ ಠಾಣೆಯ ಪೊಲೀಸರು, ಶವವನ್ನ ಹೊರಗೆ ತೆಗೆದಿದ್ದು, ಯುವಕನ ವಿಳಾಸವನ್ನ ಪತ್ತೆ ಹಚ್ಚಲು ಪ್ರಯತ್ನ ಮಾಡುತ್ತಿದ್ದಾರೆ.
ಟೀ ಶರ್ಟ್ ಹಾಕಿರುವ ಯುವಕನ ಶವದ ಪ್ಯಾಂಟಿನಲ್ಲಿ ಗುರುತಿಸುವ ಯಾವುದೇ ಚೀಟಿಗಳು ಇಲ್ಲದೇ ಇರುವುದರಿಂದ ಈತ ಯಾರೂ ಎಂಬುದು ತಿಳಿಯುತ್ತಿಲ್ಲ. ಅಷ್ಟೇ ಅಲ್ಲ, ಇದು ಆತ್ಮಹತ್ಯೆಯಾ ಅಥವಾ ಬೇರೆ ಥರದ ಪ್ರಕರಣವಾ ಎಂಬುದು ಗೊತ್ತಾಗುತ್ತಿಲ್ಲ.
ಕೆರೆಯಲ್ಲಿ ಶವವನ್ನ ತೆಗೆಯುವ ಸಮಯದಲ್ಲಿ ನೂರಾರೂ ಜನರು ಸೇರಿದ್ದರು. ಅಚ್ಚರಿಯಿಂದ ಕೆಲವರು ನೋಡುತ್ತಿದ್ದರೇ, ಇನ್ನೂ ಕೆಲವರು ವೀಡಿಯೋ ಮಾಡುವಲ್ಲಿ ಬಿಜಿಯಾಗಿದ್ದರು. ಶವವನ್ನ ಕಿಮ್ಸಗೆ ರವಾನೆ ಮಾಡಲಾಗಿದೆ. ಮೃತ ಯುವಕನ ವಿಳಾಸಕ್ಕಾಗಿ ವಿದ್ಯಾನಗರ ಠಾಣೆಯ ಪೊಲೀಸರು ಪ್ರಯತ್ನಿಸುತ್ತಿದ್ದಾರೆ.