ಸೇತುವೆಯಲ್ಲಿ ಟ್ರ್ಯಾಕ್ಟರ್ ಸಮೇತ ಚಾಲಕ ನೀರು ಪಾಲು- ಎಕ್ಸಕ್ಲೂಸಿವ್ ವೀಡಿಯೋ
1 min readವಿಜಯಪುರ: ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಸೇತುವೆ ಹಾಗೂ ಹಳ್ಳ ಜಿಲ್ಲಾಧ್ಯಂತ ತುಂಬಿ ಹರಿಯುತ್ತಿದ್ದು, ಇನ್ನೂ ಹರಿಯುತ್ತಿರುವ ಹಳ್ಳದಲ್ಲೇ ಸಾಹಸ ಪ್ರದರ್ಶಿಸಿ ಹರಿಯುತ್ತಿರುವ ಹಳ್ಳದಲ್ಲೇ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಸಮೇತ ಡ್ರೈವರ್ ನೀರು ಪಾಲಾಗಿರುವ ಘಟನೆ ಮಹಾರಾಷ್ಟ್ರದ ಕರ್ಜಗಿ ಗ್ರಾಮದಲ್ಲಿ ನಡೆದಿದೆ.
ಎಕ್ಸಕ್ಲೂಸಿವ್ ವೀಡಿಯೋ
ಕರ್ಜಗಿ ನಿವಾಸಿ ಪರಮೇಶ್ವರ ದಾಯ್ಗೋಡೆ ಹಳ್ಳದಲ್ಲಿ ಕೊಚ್ಚಿ ಹೋದ ಟ್ರಾಕ್ಟರ್ ಡ್ರೈವರ್. ಇನ್ನು ಕೊಚ್ಚಿ ಹೋಗುತ್ತಿರುವ ವಿಡಿಯೋವನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಟ್ರ್ಯಾಕ್ಟರ್ ನಲ್ಲಿ ಹಾಲಿನ ಕ್ಯಾನ್ ಗಳನ್ನ ತೆಗೆದುಕೊಂಡು ಹೋಗುತ್ತಿದ್ದ ಡ್ರೈವರ್ ಹಳ್ಳದ ಪಾಲಾಗಿದ್ದಾನೆ. ಇನ್ನು ಟ್ರ್ಯಾಕ್ಟರ್ ನಲ್ಲಿದ್ದ ಇನ್ನೊಬ್ಬ ವ್ಯಕ್ತಿ ಈಜಿ ಪಾರಾಗಿದ್ದಾನೆ.