ಹುಲಿ-ಕೃಷ್ಣಮೃಗ ಚರ್ಮದ ಜೊತೆಗೆ ಹುಲಿಯುಗುರು ಪತ್ತೆ- ಪೊಲೀಸರ ಭರ್ಜರಿ ಕಾರ್ಯಾಚರಣೆ..
1 min readವಿಜಯಪುರ: ಜಿಲ್ಲೆಯ ಇತಿಹಾಸದಲ್ಲೇ ಇಂತಹದೊಂದು ಪ್ರಕರಣ ಯಾವತ್ತೂ ಬೆಳಕಿಗೆ ಬಂದಿರಲಿಲ್ಲ. ಮೊದಲ ಬಾರಿಗೆ ಇಂತಹ ಪ್ರಕರಣವನ್ನ ವಿಜಯಪುರ ಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದು, ಜಿಲ್ಲೆಯ ಕ್ರೈಂ ವಿಭಾಗವೂ ಅಚ್ಚರಿಗೊಂಡಿದೆ.
ಖಚಿತ ಮಾಹಿತಿ ಮೇರೆಗೆ ವಿಜಯಪುರ ನಗರದಲ್ಲಿ ಮನೆಯೊಂದರ ಮೇಲೆ ದಾಳಿ ನಡೆದಿದ್ದು, ಒಂದು ದೊಡ್ಡ ಹುಲಿಯ ಚರ್ಮ, ಒಂದು ಕೃಷ್ಣ ಮೃಗದ ಚರ್ಮ ಹಾಗೂ ಎರಡು ಹುಲಿಯ ಉಗುರುಗಳು ವಶಕ್ಕೆ ಪಡೆಯಲಾಗಿದೆ.
ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಹುಲಿಯ ಚರ್ಮ ಹಾಗೂ ಉಗುರುಗಳನ್ನ ವಶಕ್ಕೆ ಪಡೆದು, ಆರೋಪಿ ಮಹೇಶ ಹಿರೇಮಠ ಬಂಧಿಸಿ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅನ್ವಯ ಕೇಸ್ ದಾಖಲು ಮಾಡಲಾಗಿದೆ.
ವಿಜಯಪುರ ಇತಿಹಾಸದಲ್ಲೇ ಇದು ಮೊದಲ ಪ್ರಕರಣ ಇದಾಗಿದೆ. ಭಾರತ ದೇಶದಲ್ಲೇ ಕೇವಲ 2967 ಹುಲಿಗಳು ಮಾತ್ರ ಇವೆ. ಇಂತಹ ಅಪರಾಧ ಪ್ರಕರಣದ ಆರೋಪಿಗೆ ಕಡಿಮೆ ಎಂದರೂ ಏಳು ವರ್ಷ ಜೈಲು ಶಿಕ್ಷೆಯಾಗಲಿದೆ ಎಂದು ಹೇಳಲಾಗಿದೆ.
ವಿಜಯಪುರ ಜಿಲ್ಲಾ ಅರಣ್ಯಾಧಿಕಾರಿ ಅಶೋಕ ಪಾಟೀಲ್ ನೇತೃತ್ವದ ತಂಡದಿಂದ ಕಾರ್ಯಾಚರಣೆ ನಡೆದಿದ್ದು, ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಪಿ.ಚವ್ಹಾಣ, ಆರ್.ಎಫ್.ಓ ಪ್ರಭುಲಿಂಗ ಭುಯ್ಯಾರ ಸೇರಿದಂತೆ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.