ಓರ್ವ ಕಳ್ಳ, 4 ಗಾಂಜಾ ಗಿರಾಕಿಗಳನ್ನ ಹೆಡಮುರಿಗೆ ಕಟ್ಟಿದ ಹುಬ್ಬಳ್ಳಿ ಪೊಲೀಸರು…!!!

ಹುಬ್ಬಳ್ಳಿ: ಎರಡು ಪ್ರಕರಣಗಳನ್ನ ಪತ್ತೆ ಹಚ್ಚಿರುವ ಕಸಬಾಪೇಟೆ ಠಾಣೆಯ ಪೊಲೀಸರು ಐವರನ್ನ ಬಂಧಿಸಿ, ಚಿನ್ನ ಸೇರಿದಂತೆ ಗಾಂಜಾ ಹಣ ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ.
ಈಶ್ವನಗರದಲ್ಲಿ ನಡೆದ ಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರದ ಅಶೋಕ ಸೊನ್ನದ ಎಂಬಾತನನ್ನ ಬಂಧಿಸಿರುವ ಪೊಲೀಸರು ಆತನಿಂದ ಒಂದು ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರ ಹಾಗೂ ಕಿವಿಯೋಲೆ ವಶಕ್ಕೆ ಪಡೆದಿದ್ದಾರೆ.
ನಾಲ್ವರಿಂದ 62 ಸಾವಿರ ರೂ. ಮೌಲ್ಯದ ಗಾಂಜಾ ವಶಕ್ಕೆ ಪಡೆಯಲಾಗಿದೆ. ಬಂಧಿತರನ್ನ ಹುಲಗೂರಿನ ಆಕಾಶ ಗಂಗಣ್ಣನವರ, ಲಕ್ಷ್ಮೇಶ್ವರದ ಸಂತೋಷ ಪಾಟೀಲ, ಸುಲೇಮಾನ ಸಿದ್ಧಿ ಹಾಗೂ ಹಳೇಹುಬ್ಬಳ್ಳಿಯ ಇಸ್ಮಾಯಿಲ ಟಪಾಲ ಎಂದು ಗುರುತಿಸಲಾಗಿದೆ.