Posts Slider

Karnataka Voice

Latest Kannada News

ಶಿಕ್ಷಕರ ಸಂಘದ ಚುನಾವಣೆ ರದ್ದುಗೊಳಿಸಿ ಆದೇಶ: ಅಕ್ರಮದ ವಿರುದ್ಧ ಬಂಡೆದಿದ್ದ ಶಿಕ್ಷಕ ಸಮೂಹ

1 min read
Spread the love

ಧಾರವಾಡ: ಕರ್ನಾಟಕ ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ನಡೆಯುತ್ತಿದ್ದು, ಮತದಾರರ ಪಟ್ಟಿಯಲ್ಲಿ ಹಣ ಕಟಾವಣೆಯಾದವರ ಹೆಸರನ್ನು ಕೈಬಿಡಲಾಗಿದೆ. ಇದನ್ನ ಸರಿಪಡಿಸಿ ಚುನಾವಣೆ ನಡೆಸುವಂತೆ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವೂ ಸೇರಿದಂತೆ ಹಲವರು ಬೇಡಿಕೆಯಿಟ್ಟ ಬೆನ್ನಲ್ಲೇ ಶಿಕ್ಷಕರ ಚುನಾವಣೆಯನ್ನ ರದ್ದು ಮಾಡಿ ಆದೇಶ ಹೊರಡಿಸಲಾಗಿದೆ.

ಈ ಬಗ್ಗೆ ರಾಜ್ಯ ಚುನಾವಣಾಧಿಕಾರಿ ಹಾಗೂ ಸಂಘದ ನೊಂದಾಣಾಧಿಕಾರಿಗಳಿಗೆ ಪತ್ರ ಬರೆದು ಆಗ್ರಹಿಸಿರುವ ಗ್ರಾಮೀಣ ಸಂಘದ ಒತ್ತಾಯ ಹೀಗಿತ್ತು ನೋಡಿ..

ಇವರಿಗೆ

ಸಿ.ಬಿ.ಜಯರಂಗ

ನಿವೃತ್ತ ಉಪನಿರ್ದೇಶಕರು ಹಾಗೂ ರಾಜ್ಯ ಚುನಾವಣಾಧಿಕಾರಿಗಳು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ 4 ನೇ  ಅಡ್ಡರಸ್ತೆ 5 ನೇ ಮುಖ್ಯರಸ್ತೆ ಗಾಂಧಿನಗರ,ಬೆಂಗಳೂರು-560009

        ವಿಷಯ:  ಸದ್ಯ ನಡೆಯುತ್ತಿರುವ ಕರ್ನಾಟಕ ರಾಜ್ಯ  ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯ ಮತದಾರ ಪಟ್ಟಿಯಲ್ಲಿ ಹೆಸರುಗಳು ಬಿಟ್ಟು ಹೋಗಿರುವ ಬಗ್ಗೆ ಆಕ್ಷೇಪಣೆ.

ದಿನಾಂಕ:23/11/2020 ರಂದು ಹೊರಡಿಸಿರುವ ಅಧಿಸೂಚನೆಯಂತೆ ಈ ರಾಜ್ಯದ 1ಲಕ್ಷದ 60  ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವಂತ ಈ ಸಂಘದಲ್ಲಿ ದಿನಾಂಕ:26/11/2020 ದಿಂದ 20/12/2020 ವರೆಗೆ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗಿದ್ದು ಸ್ವಾಗತಾರ್ಹ, ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಧಿಕ್ಕರಿಸಿ ಈ ಸಂಘವು ಈಗ ಪ್ರಕಟಪಡಿಸಿರತಕ್ಕಂತ, ಪ್ರಕಟಪಡಿಸುತ್ತಿರುವ ಮತದಾರರ ಪಟ್ಟಿಯಲ್ಲಿ ಸೇವೆಗೆ ಸೇರಿದಾಗಿನಿಂದ ಈ ತನಕ ಸದಸ್ಯತ್ವ ಕಟಾವಣೆ ಯಾಗಿದ್ದು ಅವರನ್ನು ಮತದಾರ ಪಟ್ಟಿಯಿಂದ ಕೈಬಿಟ್ಟಿರುವುದು ದುರುದ್ದೇಶದಿಂದ ಕೂಡಿರುವಂತದ್ದಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೊಲೆಯಾಗಿದೆ ಸಂವಿಧಾನದ ನಿಯಮವನ್ನು ಸಹಕಾರ ಸಂಘದ ನಿಯಮಗಳನ್ನು ಗಾಳಿಗೆ ತೂರಿದಂತಾಗಿದೆ. ಆದ್ದರಿಂದ ಸತತವಾಗಿ ಸದಸ್ಯರನ್ನು ಹೊಂದಿರುವ  ಈ ರಾಜ್ಯದ ಎಲ್ಲಾ ಮತದಾರ ಪ್ರಭುಗಳನ್ನು ಎಲ್ಲಾ ಸದಸ್ಯ ಶಿಕ್ಷಕರ ಹೆಸರುಗಳನ್ನು ಸಂಘ ಭೇದ ಮರೆತು,ಸಮುದಾಯ ಭೇದ ಮರೆತು ಪ್ರಾಂತೀಯ ಭೇದ ಮರೆತು ಪಟ್ಟಿಯಲ್ಲಿ ಹೆಸರುಗಳನ್ನು ಸೇರಿಸತಕ್ಕದ್ದು ಒಂದು ವೇಳೆ ಪಟ್ಟಿಯಲ್ಲಿ ಹೆಸರುಗಳನ್ನು ಸೇರಿಸದೇ ಚುನಾವಣೆ ಮಾಡಿದ್ದೇ ಆದಲ್ಲಿ ಇದು ಪ್ರಜಾಪ್ರಭುತ್ವದ ಒಂದು ವಿಕಾರ ರೂಪವನ್ನು ತಾಳುತ್ತದೆ. ಇದು ಸಂವಿಧಾನ ವಿರೋಧವಾದಂಥ ವ್ಯವಸ್ಥೆಯಾಗುತ್ತದೆ ಆದ್ದರಿಂದ ಇದನ್ನು ತುರ್ತಾಗಿ ಪರಿಗಣಿಸಿ ಸಂಬಂಧಿಸಿದವರು ಬಿಟ್ಟುಹೋಗಿರುವ ಹೆಸರುಗಳನ್ನು ಅದರಲ್ಲಿ ಸೇರಿಸಬೇಕೆಂದು   ಕರ್ನಾಟಕ ರಾಜ್ಯ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಎಲ್ಲ ಹಂತದ ಪದಾಧಿಕಾರಿಗಳು ಹಾಗೂ ರಾಜ್ಯದಲ್ಲಿ ಮತದಾರ ಪ್ರಭು ಗಳ ವತಿಯಿಂದ ಈ ಮೂಲಕ  ವಿನಂತಿಸಿ ಕೊಳ್ಳುತ್ತಿದ್ದೇವೆ.ಮತ್ತು ಇಲ್ಲಿ ಮುಂದುವರೆದು ಈ ಒಂದು ಚುನಾವಣಾ ಪ್ರಕ್ರಿಯೆ ಯನ್ನು ಇಲ್ಲಿಯವರೆಗೆ  ನಮಗೆ ಗೊತ್ತಿರುವಂತೆ ಕಳೆದ 4 ದಶಕಗಳಲ್ಲಿ ಸರ್ಕಾರವೇ ಚುನಾವಣೆ ನಡೆಸುತ್ತಿದ್ದು ಆದರೆ ಈ ಬಾರಿ ಸಂಘವೇ ಸಂಘದ ಅಡಿಯಲ್ಲಿ ಚುನಾವಣೆ ನಡೆಸುತ್ತಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.ಇದು ದೊಡ್ಡ ಪ್ರಮಾಣದಲ್ಲಿ ಪ್ರಜಾಪ್ರಭುತ್ವದ ನಿಯಮಗಳನ್ನು ಗಾಳಿಗೆ ಹಾರಿ ಬಿಟ್ಟಂತಾಗಿದೆ ಇದನ್ನು ನಾವು ಧಿಕ್ಕರಿಸುತ್ತೇವೆ.ಪ್ರಜಾಪ್ರಭುತ್ವಕ್ಕೆ ಯಶ ಸಾಧಿಸಬೇಕಾದರೆ ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿರುವ ಎಲ್ಲಾ ಹೆಸರುಗಳನ್ನು ಈ ಕೂಡಲೇ ಸೇರಿಸಿ ಚುನಾವಣೆ  ಪ್ರಾರಂಭಿಸಬೇಕೆಂದು ವಿನಂತಿಪೂರ್ವಕವಾಗಿ ಕೇಳಿಕೊಳ್ಳುತ್ತೇವೆ.

 ಗೌರವಪೂರ್ವಕ ಧನ್ಯವಾದಗಳೊಂದಿಗೆ

ತಮ್ಮ ವಿಶ್ವಾಸಿಕರು

ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು

ಹಾಗೂ ಸರ್ವ ಪದಾಧಿಕಾರಿಗಳು

ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಿ ರಾಜ್ಯ ಘಟಕ ಹುಬ್ಬಳ್ಳಿ


Spread the love

Leave a Reply

Your email address will not be published. Required fields are marked *