ಶಿಕ್ಷಕರಿಗೆ ಕಡ್ಡಾಯವಾಗಿ ಕೋ ವ್ಯಾಕ್ಸಿನ್ ನೀಡಲು….!
1 min readಹುಬ್ಬಳ್ಳಿ: ಕೊರೋನಾ ಮತ್ತೆ ವ್ಯಾಪಕವಾಗಿ ಹರಡುತ್ತಿರುವ ಸಮಯದಲ್ಲಿಯಾದರೂ ಶಿಕ್ಷಕರಿಗೆ ಕಡ್ಡಾಯವಾಗಿ ಕೋ ವ್ಯಾಕ್ಸಿನ್ ನೀಡುವಂತೆ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯದ ಸಿಎಂ, ಶಿಕ್ಷಣ ಸಚಿವರು, ಮುಖ್ಯ ಕಾರ್ಯದರ್ಶಿ, ಶಿಕ್ಷಣ ಆಯುಕ್ತರಿಗೆ ಪತ್ರವೊಂದನ್ನ ಬರೆದು ಮನವಿ ಮಾಡಿಕೊಂಡಿದೆ.
ಮನವಿಯ ವಿವರ ಇಲ್ಲಿದೆ ನೋಡಿ..
ವಿಷಯ:- ಶಿಕ್ಷಕರಿಗೆ ಕಡ್ಡಾಯವಾಗಿ ಕೋ ವ್ಯಾಕ್ಸಿನ್ ನೀಡುವಂತೆ ಗ್ರಾಮೀಣ ಶಿಕ್ಷಕರ ಸಂಘದಿಂದ ಸರ್ಕಾಕ್ಕೆ ಮನವಿ…..
ಈ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಘಟಕ ರಿ ಹುಬ್ಬಳ್ಳಿ ಯ ರಾಜ್ಯಾಧ್ಯಕ್ಷರು ಹಾಗೂ ಸರ್ವ ಪದಾಧಿಕಾರಿಗಳು ವಿನಂತಿಸಿಕೊಳ್ಳುವುದೇನೆಂದರೆ..
ಕರೋನಾ ಇತ್ತೀಚೆಗೆ ಮತ್ತೊಮ್ಮೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಈಗಾಗಲೇ 6-10 ನೇ ತರಗತಿ ಹಾಗೂ ಪದವಿಪೂರ್ವ ಕಾಲೇಜು, ಎಲ್ಲ ಕಾಲೇಜುಗಳು ಪ್ರಾರಂಭಗೊಂಡಿದ್ದು ಶಾಲಾ ಕಾಲೇಜುಗಳ ಶಿಕ್ಷಕರು, ಅಧ್ಯಾಪಕರು, ಪ್ರಾಧ್ಯಾಪಕರು, ಬೇರೆ ಬೇರೆ ಸ್ಥಳಗಳಿಂದ ಪ್ರಯಾಣಿಸಿ ತಮ್ಮ ಕರ್ತವ್ಯದ ಸ್ಥಳಗಳಿಗೆ ಹಾಜರಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಇವರೆಲ್ಲರಿಗೂ ವಯಸ್ಸಿನ ನಿರ್ಬಂಧ ವಿಧಿಸದೆ ಕರೋನಾ ಕೋವ್ಯಾಕ್ಸಿನ್ ನೀಡಬೇಕೆಂದು ಹಾಗೂ ಎರಡು ದಿನಗಳ ವಿಶೇಷ ರಜೆ ಮಂಜೂರಿಸಬೇಕೆಂದು ರಾಜ್ಯ ಸರ್ಕಾರದ ಮುಖ್ಯ ಮಂತ್ರಿಗಳವರಿಗೆ ಆರೋಗ್ಯ ಸಚಿವರಿಗೆ ಶಿಕ್ಷಣ ಸಚಿವರಿಗೆ ಹಾಗೂ ಮುಖ್ಯ ಕಾರ್ಯದರ್ಶಿಗಳವರಿಗೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮತ್ತು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳವರಿಗೆ ಸಂಘದ ರಾಜ್ಯಾಧ್ಯಕ್ಷರಾದ ಅಶೋಕ ಎಮ್.ಸಜ್ಜನ, ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ.ಸಿ.ಉಪ್ಪಿನ, ಗೌರವಾಧ್ಯಕ್ಷರಾದ ಎಲ್.ಆಯ್.ಲಕ್ಕಮ್ಮನವರ, ಕಾರ್ಯಾಧ್ಯಕ್ಷರಾದ ಶರಣಪ್ಪಗೌಡ್ರ, ಮಹಾಪೋಷಕರಾದ ಪವಾಡೆಪ್ಪ ಕಾಂಬಳೆ, ಕೋಶಾಧ್ಯಕ್ಷರಾದ ಎಸ್.ಎಫ್.ಪಾಟೀಲ, ಎಮ್.ಆಯ್.ಮುನವಳ್ಳಿ, ಗೋವಿಂದ ಜುಜಾರೆ, ಪೀರಸಾಬ ನದಾಫ, ನಾಗರಾಜು ಕೆ, ಎಮ್.ವಿ.ಕುಸುಮಾ, ರಾಜಶ್ರೀ ಪ್ರಭಾಕರ, ರಾಮಪ್ಪ ಹಂಡಿ, ಜಿ.ಟಿ.ಲಕ್ಷ್ಮಿದೇವಮ್ಮರೇಖಾದೇವಿ, ಶರಣಬಸವ ಬನ್ನಿಗೋಳ ಹಾಗೂ ಎಲ್ಲ ಪದಾಧಿಕಾರಿಗಳು ಪತ್ರ ಬರೆದು ವಿನಂತಿಸಿದ್ದಾರೆ.