ಒಂದೇ ಜಿಲ್ಲೆಯಲ್ಲಿ 23 ಶಿಕ್ಷಕರು, 10 ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್
1 min readವಿಜಯಪುರ: ಬಹು ದಿನಗಳ ನಂತರ ಆರಂಭವಾಗಿರುವ ಶಿಕ್ಷಣ ಸಂಸ್ಥೆಗಳು ಮತ್ತೆ ಗಾಬರಿಯಾಗುವಂತ ಸ್ಥಿತಿಯನ್ನ ಎದುರಿಸುವ ಪ್ರಕರಣಗಳು ಬಯಲಿಗೆ ಬರುತ್ತಿದ್ದು, ಒಂದೇ ಜಿಲ್ಲೆಯಲ್ಲಿ 23 ಶಿಕ್ಷಕರಿಗೆ ಹಾಗೂ ಹತ್ತು ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
ಈ ಕುರಿತು ಮಾಹಿತಿ ನೀಡಿರುವ ವಿಜಯಪುರ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ, 373 ಶಿಕ್ಷಕರ ತಪಾಸಣೆ ಮಾಡಿದ್ದು, ಇದರಲ್ಲಿ 23 ಶಿಕ್ಷಕರಿಗೆ ಕೊರೋನಾ ದೃಢಪಟ್ಟಿದೆ. ಒಟ್ಟು 3541 ವಿದ್ಯಾರ್ಥಿಗಳ ಪೈಕಿ ಹತ್ತು ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್ ಬಂದಿದೆ ಎಂದು ವಿವರಿಸಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನ ಆರಂಭಿಸಬೇಕೆಂಬ ಉದ್ದೇಶದಿಂದ ಸಿಎಂ ಯಡಿಯೂರಪ್ಪ ಬೆಂಗಳೂರಿನಲ್ಲಿ ಸಭೆ ಕರೆದು ಇನ್ನೂ 24 ಗಂಟೆ ಕಳೆದಿಲ್ಲ. ಅಷ್ಟರಲ್ಲಿಯೇ ಇಂತಹದೊಂದು ಮಾಹಿತಿ ಹೊರಗೆ ಬಂದಿದೆ.
ಕೊರೋನಾ ಎರಡನೇಯ ಹಂತ ಮತ್ತೆ ಆರಂಭವಾಗುವ ಲಕ್ಷಣವಿದೆ ಎಂದು ಹೇಳಲಾಗುತ್ತಿದೆ. ಈ ನಡುವೆ ಶಿಕ್ಷಣ ಸಂಸ್ಥೆಗಳು ಶಾಲೆಗಳನ್ನ ಆರಂಭಿಸಬೇಕು ಎನ್ನುತ್ತಿದ್ದಾರೆ. ಆದರೆ, ಪಾಸಿಟಿವ್ ಪ್ರಕರಣಗಳು ಮಾತ್ರ ಕಡಿಮೆಯಾಗುತ್ತಿಲ್ಲ.