Posts Slider

Karnataka Voice

Latest Kannada News

ಶಿಕ್ಷಕ ದಂಪತಿಗೆ ಕೊರೋನಾ ಸೋಂಕು: ಸರಕಾರವೇ ಭರಿಸಲಿದೆ ಖರ್ಚು

1 min read
Spread the love

ದಕ್ಷಿಣಕನ್ನಡ: ವಿದ್ಯಾಗಮದಿಂದಾಗಿ ಶಿಕ್ಷಕ ದಂಪತಿಗಳಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ನನ್ನ ತಾಯಿಗೆ ಏನೇ ಆದರೂ ಸರಕಾರವೇ ಹೊಣೆ ಎಂದು ಸೋಷಿಯಲ್ ಮೀಡಿಯಾದ ಮೂಲಕ ಶಿಕ್ಷಕಿಯ ಪುತ್ರಿ ಹೇಳಿದ ಬೆನ್ನಲ್ಲೇ, ಇಬ್ಬರ ಖರ್ಚನ್ನ ಸರಕಾರವೇ ಭರಿಸಲಿದೆ ಎಂದು ಅಧಿಕೃತವಾಗಿ ಸಚಿವರೇ ಹೇಳಿದ್ದಾರೆ.

ದಕ್ಷಿಣಕನ್ನಡ ಜಿಲ್ಲೆಯ ಮೂಡಬಿದರೆಯ ಡಿಜೆ ಅನುದಾನಿತ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿದ್ದ ಶಶಿಕಾಂತ ವೈ ಹಾಗೂ ಪದ್ಮಾಕ್ಷಿ ಮಕ್ಕಿಯ ಜವಹರಲಾಲ್ ನೆಹರು ಅನುದಾನಿತ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಕೋವಿಡ್-19 ಹಿನ್ನೆಲೆಯಲ್ಲಿ ಶಾಲೆಗಳು ಬಂದಾಗಿದ್ದರೂ ಕೂಡಾ, ವಿದ್ಯಾಗಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪರಿಣಾಮ ಇಬ್ಬರಿಗೂ ಕೊರೋನಾ ಪಾಸಿಟಿವ್ ದೃಢಪಟ್ಟಿತ್ತು.

ಪೋಷಕರ ತೊಂದರೆಯ ಬಗ್ಗೆ ಇಂಜಿನಿಯರಿಂಗ್ ಕಲಿಯುತ್ತಿರುವ ಮಗಳು ಐಶ್ಚರ್ಯ, ತನ್ನ ತಾಯಿಗೆ ಏನೇ ಆದರೂ ಸರಕಾರವೇ ಹೊಣೆ ಎಂದು ಹೇಳಿದ್ದರು. ಅಷ್ಟೇ ಅಲ್ಲ, ನನ್ನ ಕುಟುಂಬಕ್ಕೀಗ ವೈಧ್ಯಕೀಯ ಸವಲತ್ತುಗಳಿಗಾಗಿ ಆರ್ಥಿಕ ನೆರವು ಬೇಕಾಗಿದೆ ಎಂದಿದ್ದಳು.

ಈ ಹಿನ್ನೆಲೆಯಲ್ಲಿ ಇಂದು ಸರಕಾರವೇ ಮುಂದೆ ಬಂದು ಸಚಿವ ಸುರೇಶಕುಮಾರ, ಸ್ಪಷ್ಟವಾಗಿ ಜಿಲ್ಲಾಡಳಿಕ್ಕೆ ನಿರ್ದೇಶನ ನೀಡಿದ್ದಾರೆ. ಈ ಮೂಲಕ ಶಿಕ್ಷಕರ ನೋವಿಗೆ ಸ್ಪಂಧಿಸಿದ್ದಾರೆ.

ಸ್ಚತಃ ಸುರೇಶಕುಮಾರ ಫೇಸ್ ಬುಕಲ್ಲಿ ಬರೆದುಕೊಂಡಿದ್ದು ಹೀಗೆ

ದಕ್ಷಿಣ ಕನ್ನಡ ಜಿಲ್ಲೆ‌ ಮೂಡಬಿದರೆಯ ಐಶ್ವರ್ಯ ಜೈನ್ ತನ್ನ ಕೋವಿಡ್ ಸೋಂಕಿತ ತಾಯಿಯ ವೈದ್ಯಕೀಯ ಶುಶ್ರೂಶೆಗೆ ಪರಿತಪಿಸುತ್ತಿದ್ದ ಅಂಶ, ಆಕೆ ನನ್ನನ್ನು ಸಂಪರ್ಕಿಸಲು ಪ್ರಯತ್ನಿಸಿದ ಅಂಶ ಇಂದು ಬೆಳಗ್ಗೆ ಮಾಧ್ಯಮಗಳ ಮೂಲಕ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿರುವ ನನ್ನ ಗಮನಕ್ಕೆ ಬಂದಿತು.

ಕೂಡಲೇ ಈ ಬಗ್ಗೆ ಜಿಲ್ಲಾಡಳಿತವನ್ನು ಎಚ್ಚರಿಸಿ ಕ್ರಮ ವಹಿಸಲು ಸೂಚಿಸಲಾಯಿತು.

ಐಶ್ವರ್ಯ ಜೈನ್ ಅವರ ತಾಯಿಯ ಸಂಪೂರ್ಣ ಚಿಕಿತ್ಸೆಯ ಖರ್ಚು ವೆಚ್ಚವನ್ನು ಸರ್ಕಾರ ಭರಿಸಲು ನಿರ್ಣಯಿಸಿದೆ. ಅತ್ಯುತ್ತಮ ಚಿಕಿತ್ಸೆಯನ್ನು ಆಸ್ಪತ್ರೆ ಅವರಿಗೆ ಒದಗಿಸಲಿದೆ.

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗೆ ಖುದ್ದು ದೂರವಾಣಿ ಮೂಲಕ ಸೂಚನೆ ನೀಡಿದ ಮುಖ್ಯಮಂತ್ರಿ ಗಳಾದ ಬಿ.ಎಸ್.ಯಡಿಯೂರಪ್ಪನವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಸಲ್ಲುತ್ತವೆ.

ಅಂತೆಯೇ ತನ್ನ ಪೋಷಕರ ಬಗ್ಗೆ ಇಷ್ಟು ಕಾಳಜಿ ವಹಿಸಿದ ಕು.ಐಶ್ವರ್ಯಳಿಗೆ ನನ್ನ ಅಭಿನಂದನೆಗಳು.


Spread the love

Leave a Reply

Your email address will not be published. Required fields are marked *