ತಲವಾಯಿಯಲ್ಲಿ “ಆಸ್ತಿ” ಬಡಿದಾಟ: ಇಬ್ಬರ ಸ್ಥಿತಿ ಗಂಭೀರ…!!!
1 min readಧಾರವಾಡ: ಆಸ್ತಿ ವಿಷಯವಾಗಿ ಆರಂಭವಾದ ಜಗಳವು ವಿಕೋಪಕ್ಕೆ ಹೋದ ಪರಿಣಾಮ ಇಬ್ಬರು ಮಾರಣಾಂತಿಕವಾಗಿ ಹಲ್ಲೆಗೆ ಒಳಗಾದ ಘಟನೆ ಧಾರವಾಡ ತಾಲೂಕಿನ ತಲವಾಯಿಯಲ್ಲಿ ಸಂಭವಿಸಿದೆ.
ಫಕೀರಪ್ಪ ಕಮ್ಮಾರ ಹಾಗೂ ಅಶೋಕ ಕಮ್ಮಾರ ಗುಂಪು ನಡುವೆ ಬಡಿದಾಟ ನಡೆದಿದ್ದು, ಮನೆ, ಹೊಲಕ್ಕೆ ಸಂಬಂಧಿಸಿದಂತೆ ಅಶೋಕ ಕಮ್ಮಾರ (45) ಹುಬ್ಬಳ್ಳಿಯ ಕಿಮ್ಸ್ಗೆ ದಾಖಲಾಗಿದ್ದರೇ,
ಫಕೀರಪ್ಪ ಕಮ್ಮಾರ(50) ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.
ವೀಡಿಯೋ…
ಅಶೋಕ ಸ್ಥಿತಿ ಗಂಭೀರವಾಗಿದ್ದು, ಪೊಲೀಸರು ಕಿಮ್ಸಗೆ ದೌಡಾಯಿಸಿದ್ದಾರೆ. ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಕ್ಕೀರಪ್ಪ ಮತ್ತು ಅಶೋಕ ಖಾಸಾ ಸಹೋದರರಿದ್ದು, ಮಹಿಳೆಯರು ಕಿಮ್ಸನಲ್ಲಿ ಕಣ್ಣೀರಿಡುತ್ತಿದ್ದಾರೆ.