ಧಾರವಾಡ ಡಿಡಿಪಿಐ ಕಚೇರಿಗೆ ಪೊಲೀಸ್ ಸರ್ಪಗಾವಲು… ಏಕೆ, ಏನಾಯ್ತು ಗೊತ್ತಾ…!?
1 min readಧಾರವಾಡ: ವಿದ್ಯಾಕಾಶಿಯ ಡಿಡಿಪಿಐ ಅವರ ಹಗರಣವೂ ಮುಗಿಯದ ಕಥೆಯಾಗಿದ್ದು, ಜಿಲ್ಲಾಡಳಿತವೂ ಕಣ್ಣು-ಬಾಯಿ ಮುಚ್ಚಿಕೊಂಡು ಕುಳಿತ ಪರಿಣಾಮ ಮತ್ತೆ ಇಂದು ಹೋರಾಟಕ್ಕೆ ಗ್ರಾಮಸ್ಥರು ಮುಂದಾಗಿದ್ದಾರೆ.
ಧಾರವಾಡ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ ಅವರು ಮಾಡಿದ್ದರೆನ್ನಲಾದ ಹಗರಣವೊಂದು ಜಿಲ್ಲೆಯಲ್ಲಿ ಸಾಕಷ್ಟು ಸದ್ದು ಮಾಡಿ, ಮರ್ಯಾದೆಯನ್ನ ಹಾಳು ಮಾಡುತ್ತಿದೆ.
ಅನುದಾನಿತ ಶಾಲೆಯ ಶಿಕ್ಷಕರ ನೇಮಕದಲ್ಲಿ ಆಗಿರುವ ಅನ್ಯಾಯವನ್ನ ಸರಿಪಡಿಸುವಂತೆ ಗ್ರಾಮದ ಹಲವರು ಹೋರಾಟ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದರೂ, ಅವ್ಯವಹಾರ ನಿರಂತರವಾಗಿ ನಡೆಯುತ್ತಿದೆಯಂತೆ.
ಹೋರಾಟದ ಹಿನ್ನೆಲೆಯಲ್ಲಿ ಪೊಲೀಸರು ಡಿಡಿಪಿಐ ಕಚೇರಿಯ ಮುಖ್ಯದ್ವಾರವನ್ನ ಬಂದ್ ಮಾಡಿ ಬಂದೋಬಸ್ತ್ ನಡೆಸಿದ್ದಾರೆ. ಕಚೇರಿಗೆ ಬರುವ ಸಿಬ್ಬಂದಿಗಳು ಕೂಡಾ ರಸ್ತೆಯ ಪಕ್ಕದಲ್ಲಿ ವಾಹನಗಳನ್ನ ನಿಲ್ಲಿಸಿ ಹೋಗುವ ಸ್ಥಿತಿ ನಿರ್ಮಾಣವಾಗಿದೆ.