ತಡಕೋಡದಲ್ಲಿ ಬೈಲಹೊಂಗಲದ ಯುವಕನ ದುರ್ಮರಣ…!

ಧಾರವಾಡ: ಕುರಿಗಳಿಗೆ ನೀರು ಕುಡಿಸಲು ಹೋಗಿದ್ದ ಯುವಕನೋರ್ವ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಧಾರವಾಡ ತಾಲೂಕಿನ ತಡಕೋಡ ಗ್ರಾಮದಲ್ಲಿ ನಡೆದಿದೆ.

ಬೈಲಹೊಂಗಲ ತಾಲೂಕಿನ ವನ್ನೂರ ಗ್ರಾಮದ ಕುರಿಗಾಯಿ ಡೆಂಗಪ್ಪ ಗಂಗಪ್ಪ ಸುರನ್ನವರ ಎಂಬ 18 ವರ್ಷದ ಯುವಕನೇ ಸಾವಿಗೀಡಾಗಿದ್ದು, ಸ್ಥಳೀಯರು ಆತನ ಶವವನ್ನ ಹೊರಗೆ ತೆಗೆದಿದ್ದಾರೆ.
ಕುರಿಗಳನ್ನ ಕಾಯಿಸುತ್ತ ಕುರಿಗಳಿಗೆ ಬಾಯಾರಿಕೆಯಾದ ಹಿನ್ನೆಲೆಯಲ್ಲಿ ಕೆರೆಯಲ್ಲಿ ನೀರು ಕುಡಿಸಲು ಬಂದಿದ್ದಾನೆ. ಇದೇ ಸಮಯದಲ್ಲಿ ತಾನೂ ನೀರಿನಲ್ಲಿ ಹೋಗಿ, ಗುಂಡಿಯಲ್ಲಿ ಬಿದ್ದು ನೀರಿನಲ್ಲಿ ಮುಳುಗಿ ಪ್ರಾಣವನ್ನ ಕಳೆದುಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದ ಹಾಗೇ ಗರಗ ಪೊಲೀಸ್ ಠಾಣೆಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.