ಮಾಸ್ ಲೀಡರ್ ಸಂತೋಷ ಲಾಡ್ ಗೆ ಕಲಘಟಗಿ ಕರ್ಮಭೂಮಿ…!

ಧಾರವಾಡ: ತಾಲೂಕಿನ ಕೆಲಗೇರಿ ಬಳಿ ನಡೆದ ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷರ ಸತ್ಕಾರ ಸಮಾರಂಭ ಕೇವಲ ನಾಮಕೆವಾಸ್ತೆ ನಡೆಯಿತಾ ಎಂಬ ಸಂಶಯ ಮೂಡಿದ್ದು, ಹಲವರು ಹಲವು ರೀತಿಯಲ್ಲಿ ಪಕ್ಷವನ್ನ ಹಿಬ್ಬಾಗ ಮಾಡುವ ಯೋಚನೆಯಲ್ಲಿ ಕಂಡು ಬಂದಂತೆ ಭಾಸವಾಗಿದೆ.

ಸುಮಾರು ಒಂದು ತಿಂಗಳ ನಂತರ ಸತ್ಕಾರ ಕಾರ್ಯಕ್ರಮ ಆಯೋಜನೆ ನಡೆದಿದ್ದು, ಇದರಲ್ಲಿ ಹಲವು ಗ್ರಾಮ ಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷರು ಭಾಗವಹಿಸಿಲ್ಲ. ಇದಕ್ಕೆ ಕಾರಣವಾಗಿದ್ದು, ಒನ್ಸ್ ಅಗೇನ್ ಅದೇ ರಾಜಕೀಯ.
ಕಲಘಟಗಿ ತಾಲೂಕಿನಲ್ಲಿ ಪಕ್ಷ ಸಂಘಟನೆಯಾಗಬೇಕು. ಮುಂದಿನ ದಿನದಲ್ಲಿ ಕಾಂಗ್ರೆಸ್ ನವರು ಶಾಸಕರಾಗಬೇಕೆಂದು ನಾಗರಾಜ ಛಬ್ಬಿಯವರು ಹೇಳಿದ್ದನ್ನೇ, ಕೆಲವರು ಅಪಾರ್ಥ ಮಾಡಿಕೊಂಡು, ಸಂತೋಷ ಲಾಡ ಅವರಿಗೆ ಟಿಕೆಟ್ ಸಿಗೋದಿಲ್ಲವೆಂದು ಅಪಪ್ರಚಾರ ಮಾಡಲು ಹೊರಟಿದ್ದು, ರಾಜಕೀಯ ಪಂಡಿತರಿಗೆ ಕುಚ್ಯೋಧ್ಯವೆನಿಸುತ್ತಿದೆ.
ಮಾಜಿ ಸಚಿವ ಸಂತೋಷ ಲಾಡ, ಕಲಘಟಗಿ ಕ್ಷೇತ್ರದಲ್ಲಿ ಮಾಡಿದ ನೂರಾರೂ ಕೆಲಸಗಳು ಜನರ ಮನದಲ್ಲಿವೆ. ಈಗಲೂ ಸಂತೋಷ ಲಾಡರೇ ಇಲ್ಲಿ ಮುಂದಿನ ಶಾಸಕರು ಎಂದು ಸಾವಿರಾರೂ ಕಾರ್ಯಕರ್ತರು ಹೇಳುತ್ತಿದ್ದಾರೆ. ಅಂತಹದರಲ್ಲಿ ಸುಖಾಸುಮ್ಮನೆ, ನಾಗರಾಜ ಛಬ್ಬಿ ಹಾಗೂ ಸಂತೋಷ ಲಾಡರ ನಡುವೆ ಮನಸ್ತಾಪ ಬೆಳೆಸುವ ಕುತಂತ್ರಕ್ಕೆ ಕೆಲವರು ಮುಂದಾಗಿದ್ದಾರೆ.
ಆದರೆ, ಇಂದಿನ ಕಾರ್ಯಕ್ರಮದಲ್ಲಿ ಸಂತೋಷ ಲಾಡ ವಿರುದ್ಧ ಸತೀಶ ಜಾರಕಿಹೊಳಿಯವರನ್ನ ಎತ್ತಿಕಟ್ಟುವ ಪ್ರಯತ್ನ ನಡೆದಿದೆ ಎಂದು ಹೇಳಲಾಗುತ್ತಿದೆಯಾದರೂ, ಕಾಂಗ್ರೆಸ್ ಬಲ್ಲವರು… ಸಂತೋಷ ಲಾಡ ಅವರ ಜನಪ್ರಿಯತೆಯನ್ನ ಬಲ್ಲವರಾಗಿದ್ದಾರೆ.
ಅಸಲಿಗೆ ನಾಗರಾಜ ಛಬ್ಬಿಯವರು ಇಂದು ಮಾತನಾಡುವಾಗ ಪಕ್ಷ ಬೆಳೆಸಲು ಸಾರಥಿಯಾಗಬೇಕು ಎಂದು ಹೇಳಿದ್ದಾರೆ ವಿನಃ, ನಾನೇ ಅಭ್ಯರ್ಥಿಯಾಗುತ್ತೇನೆ. ನನ್ನ ಗೆಲ್ಲಿಸಲು ನೀವು ಸಾರಥಿಯಾಗಬೇಕು ಎಂದಿಲ್ಲ… ಮಾತನ್ನ ಸರಿಯಾದ ರೀತಿಯಲ್ಲಿ ಕೇಳಿಸಿಕೊಂಡರೇ, ಅಪಾರ್ಥಗಳು ಕಡಿಮೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ..
ಇಲ್ಲಿ ವೀಡಿಯೋ ಇದೆ ಬೇಕಿದ್ದರೇ ಮತ್ತೋಮ್ಮೆ ಕೇಳಿ…