ನಾಳೆ ಹಸೆಮಣೆ ಏರಬೇಕಿದ್ದ ಸಾವಿತ್ರಿ-ನೌಕರಿ ಪಡೆಯಬೇಕಿದ್ದ ಮಲ್ಲಪ್ಪ: ಕಿಮ್ಸನ ಶವಾಗಾರದ ಮುಂದೆ ಕಣ್ಣೀರ ಕೋಡಿ…
1 min readಹುಬ್ಬಳ್ಳಿ: ಇದ್ದೋಬ್ಬ ಮಗನಿಗೆ ಅವರಿವರ ಕೈ ಕಾಲು ಹಿಡಿದು ನೌಕರಿ ಕೊಡಿಸಬೇಕೆಂದು ಬೆಂಗಳೂರಿಗೆ ಹೋಗಿದ್ದ ತಂದೆ ಒಂದು ಕಡೆಯಾದರೇ, ನಾಳೆಗೆ ಮಗಳ ಧಾರೆಯರೆದು ಕೊಡಲು ಕ್ಷಣಗಣನೆಗೆ ಮುಂದಾಗಿದ್ದ ಮತ್ತೋರ್ವ ತಂದೆಯಿಬ್ಬರು, ಹುಬ್ಬಳ್ಳಿಯ ಕಿಮ್ಸನ ಶವಾಗಾರದ ಮುಂದೆ ಕಣ್ಣೀರಾಕುತ್ತಿದ್ದಾರೆ. ಅದಕ್ಕೆ ಕಾರಣವಾಗಿದ್ದು, ಎರಡು ಕನಸುಗಳು ಶವವಾಗಿ ಮಲಗಿದ್ದು.
ಹೌದು.. ತಡಹಾಳ ಗ್ರಾಮದ ಮಲ್ಲಪ್ಪ ಮಾದರ ಡಿಗ್ರಿ ಮುಗಿಸಿ ನೌಕರಿ ಮಾಡಬೇಕೆಂದು ಕನಸು ಕಂಡಿದ್ದ. ಹಾಗೇ ಅದೇ ಗ್ರಾಮದ ಸಾವಿತ್ರಿ ಮುತ್ತಪ್ಪ ನರಗುಂದ ಈತನ ಪ್ರೇಮದಲ್ಲಿ ಮುಳುಗಿದ್ದಳು. ಮದುವೆ ಫಿಕ್ಸ್ ಆಗಿದ್ದನ್ನೇ ಮನಸ್ಸಿಗೆ ಹಚ್ಚಿಕೊಂಡು ಅಂತರ್ಜಾತಿ ವಿವಾಹ ನಡೆಯುವುದಿಲ್ಲವೆಂದುಕೊಂಡು ಇಬ್ಬರು ವಿಷ ಸೇವಿಸಿ, ಕಿಮ್ಸನಲ್ಲಿ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ. ಇವರಿಬ್ಬರ ಕುಟುಂಬಗಳೀಗ, ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.
ಸಂಪೂರ್ಣ ವೀಡಿಯೋ ಇಲ್ಲಿದೆ ನೋಡಿ..
ಅಂತರ್ಜಾತಿ ವಿವಾಹವನ್ನ ಗ್ರಾಮೀಣ ಭಾಗದಲ್ಲಿ ಒಪ್ಪುವುದಿಲ್ಲವೆಂಬ ಕಾರಣಕ್ಕೆ ತಾವೇ ಹೀಗೆ ಮಾಡಿಕೊಂಡರಾ ಎಂಬ ಪ್ರಶ್ನೆ ಕಾಡಲಾರಂಭಿಸಿದೆ. ಏಕೆಂದರೆ, ಎರಡು ಮನೆಯವರಿಗೆ ವಿಷಯವೇ ಗೊತ್ತಿಲ್ಲವೆನ್ನುತ್ತಿದ್ದಾರೆ.
ವಿದ್ಯಾವಂತರಾಗಿದ್ದ ಇಬ್ಬರು ಬದುಕುವ ಸಮಯದಲ್ಲಿ ಬದುಕನ್ನ ಚಿವುಟಿಕೊಂಡಿದ್ದು ಮಾತ್ರ ದುರಂತವೇ ಸರಿ.