ನವನಗರದಲ್ಲಿ “ಸೂಸೈಡ್ ದುರಂತ” ದೀಪಕ ಪಟಧಾರಿ ಪತ್ನಿ ಇನ್ನಿಲ್ಲ… Big Exclusive

ಹುಬ್ಬಳ್ಳಿ: ಗಂಗಿವಾಳ ಗ್ರಾಮ ಪಂಚಾಯತಿ ಸದಸ್ಯ ದೀಪಕ ಪಟಧಾರಿಯ ಪತ್ನಿಯು ನವನಗರದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣ ದುರಂತ ಅಂತ್ಯದತ್ತ ಸಾಗುತ್ತಿದೆ.
ಕೆಲವು ದಿನಗಳ ಹಿಂದಷ್ಟೇ ಮೀಡಿಯಾದವರ ಮುಂದೆ ಪುಷ್ಪಾ ಪಟಧಾರಿ, ತನ್ನ ಗಂಡನ ಹತ್ಯೆಯ ಹಿಂದೆ ಹಲವು ಪೊಲೀಸರು ಇದ್ದಾರೆಂದು ಆರೋಪಿಸಿದ್ದರು.
ಅಂದು ಮಾತಾಡಿದ ವೀಡಿಯೋ ಇಲ್ಲಿದೆ ನೋಡಿ…
ರಾಯನಾಳದ ನಿವಾಸಿಯಾಗಿದ್ದ ದೀಪಕ ಪಟಧಾರಿಯನ್ನ ಪ್ರೀತಿಸಿ ಮದುವೆಯಾಗಿದ್ದ ಪುಷ್ಪಾ ಎರಡು ಮಕ್ಕಳನ್ನ ಹೊಂದಿದ್ದರು. ಗಂಡನ ಹತ್ಯೆಯನ್ನ ಸಿಓಡಿಗೆ ಸರಕಾರ ಒಪ್ಪಿಸಿದ ನಂತರ ಪುಷ್ಪಾ ಆತ್ಮಹತ್ಯೆಗೆ ಶರಣಾಗಿದ್ದು, ಮತ್ತಷ್ಟು ಗೊಂದಲ ಸೃಷ್ಡಿಯಾಗಿದೆ.