ಹುಬ್ಬಳ್ಳಿ: ಗ್ರಾಪಂ ಅಧ್ಯಕ್ಷ ಮಹೇಶ ಚಿಕ್ಕವೀರಮಠ ಪೊಲೀಸ್ ವಶಕ್ಕೆ- 10ಲಕ್ಷಕ್ಕೆ 65 ಲಕ್ಷ ಬಡ್ಡಿ…!!!
ಹುಬ್ಬಳ್ಳಿ: ಶಿಗ್ಗಾಂವಿ ತಾಲೂಕಿನ ಕುಕನೂರ ಗ್ರಾಮ ಪಂಚಾಯತಿ ಅಧ್ಯಕ್ಷನೂ ಆಗಿರುವ ಯುವಕನೋರ್ವ ನೀಡಿದ ಕಿರುಕುಳದಿಂದ ವ್ಯಕ್ತಿಯೋರ್ವ ಭೀಕರವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂಬ ಆರೋಪದಡಿ, ಆತನನ್ನ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಹುಬ್ಬಳ್ಳಿಯಲ್ಲಿ ಸಂಭವಿಸಿದೆ.
ವೀಡಿಯೋ…
ಸಿದ್ದು ಕೆಂಚಣ್ಣನವರ ಎಂಬ 43 ವರ್ಷದ ವ್ಯಕ್ತಿಯೋರ್ವ ಲಾರಿಗೆ ಅಪಘಾತಪಡಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಮಹೇಶ ಚಿಕ್ಕವೀರಮಠ ನೀಡಿದ ಕಿರುಕುಳವೇ ಕಾರಣ ಎಂಬ ವಿಷಯ ಡೆತ್‌ನೋಟ್‌ನಲ್ಲಿದೆ. ಈ ಬಗ್ಗೆ ಹಾಲಿ ಕುಕನೂರು ಗ್ರಾಪಂ ಅಧ್ಯಕ್ಷನೂ ಆಗಿರುವ ಮಹೇಶನನ್ನ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಕಮೀಷನರ್ ಮಾಹಿತಿ ನೀಡಿದ್ದಾರೆ.
ಮಹೇಶನಿಂದ 10 ಲಕ್ಷ ರೂಪಾಯಿ ಪಡೆದಿದ್ದ ಅದಕ್ಕೆ 65 ಲಕ್ಷ ರೂಪಾಯಿ ಬಡ್ಡಿಯನ್ನ ನೀಡಿದ್ದಾನೆಂದು ಕುಟುಂಬದವರು ಆರೋಪಿಸಿದ್ದಾರೆ.