ಹುಬ್ಬಳ್ಳಿಯಲ್ಲಿ “ಸಂಘದ ಸಾಲ” ಕಿರಿಕಿರಿಗೆ ಬೇಸತ್ತು ಆತ್ಮಹತ್ಯೆಗೆ ಯತ್ನ…!!!
*Exclusive*
ಮೈಕ್ರೋ ಪೈನಾನ್ಸ್ ಕಿರುಕುಳಕ್ಕೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ; ನಮಗೆ ದುಡ್ಡು ಬೇಕೇ ಬೇಕು ಎಂದ ಪೈನಾನ್ಸ್ ಸಿಬ್ಬಂದಿ
ಹುಬ್ಬಳ್ಳಿ: ರಾಜ್ಯದಲ್ಲಿ ಜನರು ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಊರು ಬಿಟ್ಟು ಹೋಗೋದು ಒಂದೇಡೆಯಾದ್ರೆ ಕೆಲವು ಜನ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೇ ಅಂಕುಶ ಹೇರಲು ಮುಂದಾಗಿದೆ. ಇದೇಲ್ಲರ ನಡುವೆ ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿಯಲ್ಲಿ ಫೈನಾನ್ಸ್ ಕಿರುಕುಳಕ್ಕೆ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾನೆ.
ವೀಡಿಯೋ….
ಕೆಎಂಸಿ ಆರ್ಐ ಆಸ್ಪತ್ರೆಯ ಬೆಡ್ ಮೇಲೆ ಮಲಗಿರೋ ಈತನ ಹೆಸರು ಮಾಬುಲಿ ಅಂತಾ. ಕಮರಿಪೇಟೆಯ ನಿವಾಸಿ. ಈತ ಕಳೆದ 4 ವರ್ಷಗಳ ಹಿಂದೆ ವಿವಿಧ ಪೈನಾನ್ಸ್ ನಲ್ಲಿ ಸಾಲವನ್ನು ಮಾಡಿದ್ದ. ಅದೇ ರೀತಿ ಸಾಲವನ್ನು ತೀರಿಸಿಕೊಂಡು ಬರುತ್ತಿದ್ದ. ಆದ್ರೆ, ಕಳೆದ ಮೂರು ತಿಂಗಳಿಂದ ಅನಾನುಕೂಲವಾಗಿ ಸಾಲ ಮರುಪಾವತಿ ಮಾಡಲು ಆಗಿದ್ದಿಲ್ಲ. ಹೀಗಾಗಿ ಪೈನಾನ್ಸ್ ನವರು ನಮಗೆ ದುಡ್ಡು ಬೇಕೇ ಬೇಕು ಎಂದು ಮನೆಗೆ ಬಂದು ಕಿರುಕುಳ ಕೊಡಲು ಶುರು ಮಾಡಿದ ಬೆನ್ನಲ್ಲೇ ಮಾಬುಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಕಿಮ್ಸ್ ಆಸ್ಪತ್ರೆ ಹಾಗೂ ಮಾಬುಲಿ ಮನೆಗೆ ಭೇಟಿ ನೀಡಿದ ಕಮಿಷನರ್ ಎನ್. ಶಶಿಕುಮಾರ್ ಕುಟುಂಬದವರಿಂದ ಮಾಹಿತಿ ಪಡೆದಿದ್ದಾರೆ. ಅಷ್ಟೇ ಅಲ್ಲದೇ, ಕಿರುಕುಳ ಕೊಡುತ್ತಿದ್ದ ಪೈನಾನ್ಸ್ ಮೇಲೆ ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.