ಆಧುನಿಕ ಯುಗದ ಲೈಲಾ-ಮಜ್ನೂ ನೇಣಿಗೆ ಶರಣು
1 min readಯಾದಗಿರಿ: ಅವರಿಬ್ಬರೂ ಕೂಡಿಕೊಂಡು ಕೈ ಕೈ ಹಿಡಿದುಕೊಂಡು ಸಾವಿರಾರೂ ಹೆಜ್ಜೆಗಳನ್ನ ಏಳು ಹೆಜ್ಜೆ ಇಡುವ ಮುನ್ನವೇ ನಡೆದಿದ್ದರು. ಆದರೂ, ಮನೆಯವರೆದುರಿಗೆ ಏಳು ಹೆಜ್ಜೆಗಳನ್ನಿಡಬೇಕೆಂದು ಕನಸು ಕಾಣುತ್ತಿದ್ದವರಿಬ್ಬರೂ ಬಾರದ ಲೋಕಕ್ಕೆ ತೆರಳಿರುವ ಆತಂಕಕಾರಿ ಘಟನೆಯೊಂದು ಯಾದಗಿರಿ ಜಿಲ್ಲೆ ವಡಗೇರಾ ತಾಲೂಕಿನ ಗುಂಡಗುರ್ತಿ ಗ್ರಾಮದಲ್ಲಿ ನಡೆದಿದೆ.
ಗುಂಡಗುರ್ತಿ ಗ್ರಾಮದ 23 ವರ್ಷದ ಶರಣಬಸವ ಮತ್ತು 19 ವರ್ಷದ ಶೇಖಮ್ಮ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಗಾಡವಾಗಿ ಪ್ರೀತಿಸುತ್ತಿದ್ದರು. ಆದರೆ, ಇಬ್ಬರ ಪ್ರೀತಿಗೆ ಎರಡು ಮನೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಮನನೊಂದು ಮನೆಯಲ್ಲೇ ಕಬ್ಬಿಣದ ಪೈಪ್‌ಗೆ ಹಗ್ಗದಿಂದ ನೇಣು ಬಿಗಿದುಕೊಂಡು ಬಾರದ ಲೋಕಕ್ಕೆ ತೆರಳಿದ್ದಾರೆ.
ನಿನ್ನೆ ತಡರಾತ್ರಿಯೇ ಮೃತ ಶರಣಬಸವನ ದೊಡ್ಡಪ್ಪನ ಮನೆಗೆ ಶೇಖಮ್ಮ ಬಂದಿದ್ದಳು. ಆ, ಸಮಯದಲ್ಲಿ ಏನೋ ಗಲಾಟೆ ನಡೆದಿದ್ದು, ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಇಬ್ಬರೂ ಕೈ ಕೈ ಹಿಡಿದುಕೊಂಡೇ ಸಾವಿಗೆ ಶರಣಾಗಿದ್ದಾರೆ.
ಘಟನೆ ನಡೆದ ತಕ್ಷಣವೇ ಸ್ಥಳಕ್ಕೆ ಯಾದಗಿರಿ ಎಸ್ಪಿ ಋಷಿಕೇಶ್ ಭಗವಾನ್, ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಶಹಾಪುರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ..