ಉಕ್ರೇನ್ ದಲ್ಲಿ ವಿದ್ಯಾರ್ಥಿ ಸಾವು: “ಉದಾಸಿ-ಜೋಶಿ” ಹೆಸರು ಬರೆದು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆಂದ ಪಾಲಕರು….!

ಹಾವೇರಿ: ವೈಧ್ಯಕೀಯ ಶಿಕ್ಷಣ ಪಡೆಯಲು ಕಡಿಮೆ ಹಣ ಇರುವುದರಿಂದ ಅಲ್ಲಿಗೆ ಮಕ್ಕಳನ್ನ ಕಳಿಸಿದ್ದೇವೆ. ಅದನ್ನ ಭಾರತದಲ್ಲೇ ಮಾಡಿದ್ರೇ, ನಾವೇಕೆ ಕಳಿಸುತ್ತಿದ್ದೇವು ಎಂದು ಹೇಳಿಕೊಳ್ಳುವುದಲ್ಲದೇ, ತಮ್ಮ ಇನ್ನುಳಿದ ಮಕ್ಕಳು ಬಾರದೇ ಇದ್ದರೇ ಸಂಸದ ಸಿ.ಎಂ.ಉದಾಸಿ ಹಾಗೂ ಪ್ರಲ್ಹಾದ ಜೋಶಿ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪಾಲಕರು ಹೇಳಿದ್ದಾರೆ.
ರಷ್ಯಾದ ದಾಳಿಯ ಸಮಯದಲ್ಲಿ ಈಗಾಗಲೇ ನವೀನ್ ಎಂಬ ವಿದ್ಯಾರ್ಥಿ ಸಾವಿಗೀಡಾಗಿದ್ದು, ಇನ್ನೂ ಮೂವರು ಅಲ್ಲೇ ಇದ್ದಾರೆ. ಅವರಿಗೇನಾದರೂ ಆದರೇ ಏನು ಗತಿ ಎಂದು ಕಣ್ಣೀರಾಗುತ್ತಿದ್ದಾರೆ.
ಸಂಪೂರ್ಣ ವೀಡಿಯೋ ಇಲ್ಲಿದೆ ನೋಡಿ..
ವಿದ್ಯಾರ್ಥಿಗಳನ್ನ ಬದುಕಿಸಿ ತರಬೇಕು. ನಮಗೆ ಒಬ್ಬೋಬ್ಬರೇ ಮಕ್ಕಳಿದ್ದಾರೆಂದು ಪಾಲಕರು ಕೈ ಮುಗಿಯುವ ಸ್ಥಿತಿ ನಿರ್ಮಾಣವಾಗಿದೆ.