ಧಾರವಾಡದಲ್ಲಿನ ಕ್ರೌರ್ಯ… ಒಂಬತ್ತು ಹೊಲಿಗೆ ಬೀಳುವಷ್ಟು ವಿದ್ಯಾರ್ಥಿಗೆ ಥಳಿಸಿದ ದೈಹಿಕ ಶಿಕ್ಷಕ- FIR ಆದರೂ ಬಂಧನವಿಲ್ಲ…!!!

ಧಾರವಾಡ: ವಸತಿ ಶಾಲೆಯಲ್ಲಿ ಸಹಪಾಠಿಗಳು ಜಗಳ ಮಾಡಿಕೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಯೋರ್ವನ ಕೈಗೆ ಒಂಬತ್ತು ಹೊಲಿಗೆ ಬೀಳುವ ಹಾಗೆ ದೈಹಿಕ ಶಿಕ್ಷಕರೋರ್ವರು ಬಡಿದ ಪ್ರಕರಣವೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ವಿದ್ಯಾರ್ಥಿ ಹಾಗೂ ಆತನ ಪಾಲಕರು, ತಮಗೆ ಆಗಿರುವ ಅನ್ಯಾಯದ ಬಗ್ಗೆ ಮಾತನಾಡಿರುವ ವೀಡಿಯೋ ಇಲ್ಲಿದೆ ನೋಡಿ…
ಉಪನಗರ ಪೊಲೀಸ್ ಠಾಣೆಯಲ್ಲಿ ದೈಹಿಕ ಶಿಕ್ಷಕನ ಮೇಲೆ ಪ್ರಕರಣ ದಾಖಲಾಗಿದೆ. ಇಲ್ಲಿಯವರೆಗೂ ಆಡಳಿತ ಮಂಡಳಿ ಯಾವುದೇ ಕ್ರಮ ಜರುಗಿಸಿಲ್ಲ. ಡಿಡಿಪಿಐ ಅವರಂತೂ ಹೋಗಿ ನೋಡಿಯೂ ಇಲ್ಲ. ವ್ಯವಸ್ಥೆ ಇಲ್ಲಿಗೆ ಬಂದು ನಿಂತಿದೆ. ಪೊಲೀಸರು ಏನು ಮಾಡ್ತಾರೆ ಎಂಬುದನ್ನ ಕಾದು ನೋಡಬೇಕಿದೆ.