ONLINE ಕ್ಲಾಸ್ ಮೊಬೈಲ್ ಕೊಡಿಸದ ತಾಯಿ- ಆತ್ಮಹತ್ಯೆ ಶರಣಾದ ವಿದ್ಯಾರ್ಥಿನಿ
ಬೀದರ್: ಆನ್ ಲೈನ್ ಕ್ಲಾಸ್ ಕೇಳಲು ಮೊಬೈಲ್ ಕೊಡಿಸಿಲ್ಲ ಎಂಬ ಕಾರಣದಿಂದ ಕಳೆದ ಕೆಲ ದಿನಗಳ ಹಿಂದೆ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಜಿಲ್ಲೆಯ ಚಿಟ್ಟಗುಪ್ಪಾ ತಾಲೂಕಿನ ಉಡಬಾಳ ಗ್ರಾಮದ ವಿದ್ಯಾರ್ಥಿನಿ ಸುಜಾತ ತಂದೆ ನಾಮದೇವರವರ ಮನೆಗೆ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ಭೇಟಿ ನೀಡಿದರು.
ಶನಿವಾರ ಸಂಜೆ ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಶಾಸಕ ಬಂಡೆಪ್ಪ ಖಾಶೆಂಪುರ್, ವಿದ್ಯಾರ್ಥಿನಿಯ ಕುಟುಂಬಕ್ಕೆ ವಯಕ್ತಿಕ ಧನಸಹಾಯ ಮಾಡಿದರು. ಅಲ್ಲದೇ ವಿದ್ಯಾರ್ಥಿನಿಯ ಅಣ್ಣನಿಗೆ ಸ್ವಯಂ ಉದ್ಯೋಗ ಕೈಗೊಳ್ಳುವ ಸಲುವಾಗಿ ಸಂಬಂಧಿಸಿದ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯ ಒದಗಿಸಿಕೊಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯ ತಾಯಿ ವನೀತಾ, ಸಹೋದರರಾದ ಸದಾಶಿವ, ಅಭಿಷೇಕ್, ಗ್ರಾಮಸ್ಥರಾದ ಲಕ್ಷ್ಮಣ ಕಲಶೆಟ್ಟಿ, ಶಿವಾರೆಡ್ಡಿ ನಾಗನಕೇರಾ, ಜೀಲಾನಿ ಪಟೇಲ್, ಖಾಸಿಂಸಾಬ್, ಮನೋಹರ ಸೋನೈ, ಶ್ರೀರಂಗ ಮರಾಠ, ವೀರಣ್ಣ ಜನ್ನಾ, ನಾಗರೆಡ್ಡಿ, ವೈಜಿನಾಥ ಭಂಗಿ, ಸಿದ್ದೋಜಿ, ಸಾಮಾಜಿಕ ಕಾರ್ಯಕರ್ತ ರಜನಿಕಾಂತ ವಮಾ೯ ಸೇರಿದಂತೆ ಅನೇಕರಿದ್ದರು.