Posts Slider

Karnataka Voice

Latest Kannada News

SSLC ಪರೀಕ್ಷೆ: ಧಾರವಾಡ ಆತಂಕ ಮೂಡಿಸಿದ ವಿದ್ಯಾರ್ಥಿಗಳ ಗೈರು

Spread the love

ಧಾರವಾಡ: ಜಿಲ್ಲೆಯಲ್ಲಿ ಇಂದಿನಿಂದ ಆರಂಭಗೊಂಡ SSLC ಪರೀಕ್ಷೆಗೆ 1038 ವಿದ್ಯಾರ್ಥಿಗಳು ಗೈರಾಗಿದ್ದು, ಶಿಕ್ಷಕ ಸಮೂಹದಲ್ಲಿ  ಬೇಸರ ಮೂಡಿಸಿದೆ.

ಜಿಲ್ಲೆಯಲ್ಲಿ ಒಟ್ಟು 26599 ವಿದ್ಯಾರ್ಥಿಗಳು ಇಂದು ಪರೀಕ್ಷೆಗೆ ಹಾಜರಾಗಬೇಕಿತ್ತು. ಆದರೆ, ಇದ್ರಲ್ಲಿ 690 ವಿದ್ಯಾರ್ಥಿಗಳು, 348 ವಿದ್ಯಾರ್ಥಿನಿಯರು ಗೈರಾಗಿದ್ದಾರೆ. ಈ ಮೂಲಕ ಅತೀ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಯಿಂದ ದೂರುವುಳಿದಿದ್ದಾರೆ.

ಕೊರೋನಾ ವೈರಸ್ ನಿಂದ ಕಂಗಾಲಾದ ಬಹುತೇಕ ಪಾಲಕರು ಪರೀಕ್ಷೆ ನಡೆಸಬೇಡಿ ಎಂದು ಕೇಳಿಕೊಂಡರೂ ಸರಕಾರ ಪರೀಕ್ಷೆಯನ್ನ ಇಂದಿನಿಂದ ಆರಂಭಿಸಿದೆ. ಇದೇ ಕಾರಣಕ್ಕೆ ಗೈರು ಹಾಜರಾಗಿರಬೇಕೆಂದು ಹೇಳಲಾಗಿದ್ದು, ಶಿಕ್ಷಣ ಇಲಾಖೆ ಮತ್ಯಾವ ಕ್ರಮವನ್ನ ಈ ವಿದ್ಯಾರ್ಥಿಗಳಿಗೆ ಮಾಡಿಕೊಡತ್ತೆ ಎಂದು ಕಾದು ನೋಡಬೇಕಿದೆ.


Spread the love

Leave a Reply

Your email address will not be published. Required fields are marked *