SSLC ಕಾಪಿ ಚೀಟಿ ಕೊಡಲು ಹೋಗಿ ಯುವಕ ಸಾವು: ಮರಣೋತ್ತರ ಪರೀಕ್ಷೆಗಾಗಿ ವೇಟಿಂಗ್
1 min readವಿಜಯಪುರ: ಎಸ್ ಎಸ್ ಎಲ್ ಸಿ ಗಣಿತ ಪರೀಕ್ಷೆ ವೇಳೆ ಕಾಪಿ ಚೀಟಿ ಕೊಡಲು ಹೋಗಿದ್ದ ಯುವಕ ಪೊಲೀಸರಿಗೆ ಭಯ ಬಿದ್ದು ಓಡಿ ಹೋಗುವ ಸಮಯದಲ್ಲಿ ನೆಲಕ್ಕುರಳಿ ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಹೂವಿನಹಿಪ್ಪರಗಿಯ ವಿಶ್ವಚೇತನ ಪ್ರೌಢ ಶಾಲೆಯ ಹತ್ತಿರ ನಡೆದ ನಡೆದಿದೆ.
ಸಾಗರ ಚೆಲವಾದಿ ಎಂಬ ಯುವಕನೇ ಸಾವಿಗೀಡಾಗಿದ್ದು, ಪೊಲೀಸರ ಹಲ್ಲೆಗೆ ಮೃತಪಟ್ಟನಾ ಅಥವಾ ಹೃದಯಾಘಾತದಿಂದ ಮೃತಪಟ್ಟನಾ ೆಂಬ ಸಂಶಯ ಎದುರಾಗಿದೆ. ಈ ನಡುವೆ ಪೊಲೀಸರ ಹಲ್ಲೆಗೆ ಮಗ ಸಾಗರ ಮೃತಪಟ್ಟಿದ್ದಾನೆಂದು ಕುಟುಂಬಸ್ಥರ ಆರೋಪಿಸಿದ್ದು, ಇನ್ನು ಮೃತ ಸಾಗರ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ. ಈ ಕಾರಣಕ್ಕೆ ಹೃದಯಾಘಾತವಾಗಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಹೀಗಾಗಿ ಘಟನೆ ಸಾಕಷ್ಟು ಗೊಂದಲವನ್ನ ಸೃಷ್ಟಿ ಮಾಡಿದೆ. ಹೂವಿನಹಿಪ್ಪರಗಿ ಪೊಲೀಸ್ ಠಾನೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಪುರ ಎಸ್ಪಿ ಅನುಪಮ ಅಗರವಾಲ್ ಹೇಳಿಕೆ
ಯುವಕನ ಸಾವಿಗೆ ನಿಖರವಾದ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಮೃತನ ಪೋಷಕರು ಮಾಹಿತಿ ಪಡೆದಿದ್ದಾರೆ. ಯುವಕ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ. ಘಟನೆ ವೇಳೆ ಯುವಕ ಗಾಬರಿಯಾಗಿ ಬಿದ್ದಿದ್ದಾನೆ. ಪಿಎಂ ವರದಿ ನಂತರ ಎಲ್ಲವೂ ತಿಳಿಯಲಿದೆ ಎಂದು ತಿಳಿಸಿದರು.