ಎಸ್ಪಿ ಭೀಮಾಶಂಕರ ಗುಳೇದ ಕಾರು ಅಪಘಾತ..!

ಶಿವಮೊಗ್ಗ: ಸಿಐಡಿ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಭೀಮಾಶಂಕರ ಗುಳೇದ ಅವರಿದ್ದ ಸರಕಾರಿ ವಾಹನವೂ ಟಿವಿಎಸ್ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಾಯಗೊಂಡ ಘಟನೆ ನಗರದ ಆಲ್ಕೋಳ ವೃತ್ತದಲ್ಲಿ ನಡೆದಿದೆ.
ಶಿವಮೊಗ್ಗದಲ್ಲಿ ಇತ್ತೀಚೆಗೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಹೆಚ್ಚುವರಿ ಬಂದೋಬಸ್ತಗಾಗಿ ಭೀಮಾಶಂಕರ ಗುಳೇದ ಅವರು ನಗರದಲ್ಲೇ ಬೀಡು ಬಿಟ್ಟಿದ್ದು, ಇಂದು ಭಾರತ ಬಂದ್ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆಗಾಗಿ ನಗರದಲ್ಲಿ ರೌಂಡ ಹಾಕುತ್ತಿದ್ದರು. ಆಗ ಈ ದುರ್ಘಟನೆ ಸಂಭವಿಸಿದೆ.
ಕೆಎ 04- ಜಿ 920 ಸರಕಾರಿ ವಾಹನವೂ ಪುಟ್ಟಪ್ಪ ಎಂಬುವವರಿಗೆ ಸೇರಿದ ಕೆಎ 16, ಜೆ 4783 ಟಿವಿಎಸ್ ಎಕ್ಸೆಲ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಎಕ್ಸೆಲ್ ವಾಹನದಲ್ಲಿದ್ದ ಇಬ್ಬರಿಗೆ ಗಾಯಗಳಾಗಿದ್ದು, ತಕ್ಷಣವೇ ಅವರಿಬ್ಬರನ್ನೂ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಸರಕಾರಿ ವಾಹನದಲ್ಲಿ ಎಸ್ಪಿ ಭೀಮಾಶಂಕರ ಗುಳೇದ ಅವರು ವಾಹನವನ್ನ ಅಲ್ಲಿಯೇ ಬಿಟ್ಟು ತೆರಳಿದ್ದು, ಕಾರಿನ ಮುಂಭಾಗ ಜಖಂಗೊಂಡಿದೆ.